ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಉಡುಪಿ ಜಿಲ್ಲಾ ಕಚೇರಿಯನ್ನು ಉಡುಪಿ ಕೋರ್ಟ್ ಬಳಿಯ ಕಾರ್ತಿಕ್ ಟವರ್ (ಸಿ2 ನೆಲಮಹಡಿ )ನಲ್ಲಿ ಆಗಸ್ಟ್ 15 ರಂದು ಬೆಳಿಗ್ಗೆ 11 ಗಂಟೆಗೆ ಸಂಘದ ಗೌರವ ಅಧ್ಯಕ್ಷ ಸದಾಶಿವ ಶೆಟ್ಟಿ ಮಣಿಪಾಲ ಇವರು ಉದ್ಘಾಟಿಸಲಿದ್ದು, ಮಂಗಳೂರು ಸಂಘದ ಅಧ್ಯಕ್ಷ ಜಯರಾಜ್ ಕೋಟ್ಯಾನ್ ಅವರು ದೀಪ ಬೆಳಗಿಸಿ ಶುಭ ಹಾರೈಸಲಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಆರ್ ಟಿ ಓ ಇನ್ಸ್ಪೆಕ್ಟರ್ ವಿಶ್ವನಾಥ್ ನಾಯಕ್ ಮತ್ತು ಕರಾವಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಇವರು ಭಾಗವಹಿಸಲಿದ್ದಾರೆ.
ಸಂಘದ ಸದಸ್ಯರ ಬಹು ವರ್ಷದ ಕನಸಾದ ಸಂಘ ಸ್ಥಾಪನೆಯ ಅಭೂತಪೂರ್ವ ಕ್ಷಣದಲ್ಲಿ ಭಾಗಿಯಾಗಿ ಅತ್ಯಂತ ಯಶಸ್ವಿಗೊಳಿಸಲು ಸಂಘದ ಪರವಾಗಿ ಕೇಳಿಕೊಳ್ಳಲಾಗಿದೆ.