ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ: 31 ಡಿಸೆಂಬರ್ 2024 ರವರೆಗೆ ಮುಂದುವರಿಕೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) – ಸರ್ವರಿಗೂ ವಸತಿ ಯೋಜನೆಯನ್ನು 31 ಡಿಸೆಂಬರ್ 2024 ರವರೆಗೆ ಮುಂದುವರಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈಗಾಗಲೇ ಮಂಜೂರಾಗಿರುವ 122 ಲಕ್ಷ ಮನೆಗಳನ್ನು 2022ರ ಮಾರ್ಚ್ 31ರವರೆಗೆ ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಲಾಗಿದೆ. ಈ ಯೋಜನೆಯು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ನೋಡಲ್ ಏಜೆನ್ಸಿಗಳ ಮೂಲಕ ದೇಶದ ನಗರ ಪ್ರದೇಶಗಳಲ್ಲಿನ ಎಲ್ಲಾ ಅರ್ಹ ಫಲಾನುಭವಿಗಳಿಗೆ ಎಲ್ಲಾ ಹವಾಮಾನದ ಪಕ್ಕಾ ಮನೆಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿನಂತಿಯನ್ನು ಆಧರಿಸಿ ಯೋಜನೆಯನ್ನು 31ನೇ ಡಿಸೆಂಬರ್ 2024ರವಎಗೆ ಮುಂದುವರಿಸಲಾಗಿದೆ. ಫಲಾನುಭವಿಗಳ ನೇತೃತ್ವದ ಮನೆ ನಿರ್ಮಾಣ, ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ ಮತ್ತು ಇನ್-ಸಿಟು ಸ್ಲಂ ಪುನರಾಭಿವೃದ್ಧಿ ವರ್ಟಿಕಲ್‌ಗಳ ಅಡಿಯಲ್ಲಿ ಈಗಾಗಲೇ ಮಂಜೂರಾದ ಮನೆಗಳನ್ನು ಪೂರ್ಣಗೊಳಿಸಲು ಇದು ಸಹಾಯ ಮಾಡುತ್ತದೆ.

2004-2014ರಲ್ಲಿ 20 ಸಾವಿರ ಕೋಟಿ ರೂಪಾಯಿಗಳನ್ನು ಯೋಜನೆಗಾಗಿ ಅನುಮೋದಿಸಿದ್ದರೆ, 2015 ರಿಂದ ಇದುವರೆಗೆ ಎರಡು ಲಕ್ಷದ ಮೂರು ಸಾವಿರ ಕೋಟಿ ರೂಪಾಯಿಗಳನ್ನು ಅನುಮೋದಿಸಲಾಗಿದೆ.