ಕಾರ್ಕಳ: ರಾಷ್ಟ್ರಮಟ್ಟದಲ್ಲಿ ನಡೆದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಮೈನ್ 2ನೇ ಫೇಸ್ ಪರೀಕ್ಷೆಯ ಬಳಿಕ ಅಂತಿಮ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪಿ.ಯು ಕಾಲೇಜಿನ 5 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್‌ಗಳಿಸಿದ್ದಾರೆ.
ವಿದ್ಯಾರ್ಥಿಗಳಾದ ಸ್ತುತಿ ಎಸ್ 99.60 ಪರ್ಸಂಟೈಲ್(ಜನರಲ್ ಮೆರಿಟ್ 3719ನೇ ರ‍್ಯಾಂಕ್, ಒಬಿಸಿ 691ನೇ ರ‍್ಯಾಂಕ್), ಅಖಿಲ್.ಯು.ವಾಗ್ಲೆ99.56 ಪರ್ಸಂಟೈಲ್(ಜನರಲ್ ಮೆರಿಟ್ 4050ನೇ ರ‍್ಯಾಂಕ್, ಒಬಿಸಿ 776ನೇ ರ‍್ಯಾಂಕ್), ಚಿರಾಗ್.ಜಿ.ಎಸ್ 99.35 ಪರ್ಸಂಟೈಲ್(ಜನರಲ್ ಮೆರಿಟ್ 5977ನೇ ರ‍್ಯಾಂಕ್, ಒಬಿಸಿ 1220ನೇ ರ‍್ಯಾಂಕ್), ಪ್ರಜ್ವಲ್.ಜೆ.ಪಟಗಾರ್ 99.24 ಪರ್ಸಂಟೈಲ್(ಜನರಲ್ ಮೆರಿಟ್ 7020ನೇ ರ‍್ಯಾಂಕ್, ಒಬಿಸಿ 1450 ನೇ ರ‍್ಯಾಂಕ್), ಆರ್ಯ.ಪಿ.ಶೆಟ್ಟಿ 99.10 ಪರ್ಸಂಟೈಲ್(ಜನರಲ್ ಮೆರಿಟ್ 8226ನೇ ರ‍್ಯಾಂಕ್), ದಾಖಲಿಸಿದ್ದಾರೆ.
ಜೊತೆಗೆ ಆರ್ಯನ್ ವಿದ್ಯಾಧರ್ ಶೆಟ್ಟಿ 98.61 ಪರ್ಸಂಟೈಲ್ (ಒಬಿಸಿ 2838ನೇ ರ‍್ಯಾಂಕ್), ಆದರ್ಶ್ ತಟಾವಟಿ 98.42 ಪರ್ಸಂಟೈಲ್, ಸಾತ್ವಿಕ್‌ಚಂದ್ರ 98.38 ಪರ್ಸಂಟೈಲ್, ಪ್ರಜ್ಞಾವಿ. 97.92 ಪರ್ಸಂಟೈಲ್, ಕೆ.ಶಶಾಂಕ್ ಕಲ್ಕುರ 97.80 ಪರ್ಸಂಟೈಲ್ (ಜನರಲ್ ಇಡಬ್ಲುಎಸ್ 2794ನೇ ರ‍್ಯಾಂಕ್), ತೇಜಸ್ ನಿತೇಶ್‌ತೊರ್ಕೆ 97.59 ಪರ್ಸಂಟೈಲ್, ಶಶಾಂಕ್.ಆರ್.ಆಚಾರ್ಯ 97.45 ಪರ್ಸಂಟೈಲ್, ಸೃಜನ್ ಪ್ರಕಾಶ್ 97.35 ಪರ್ಸಂಟೈಲ್ (ಒಬಿಸಿ 6006ನೇ ರ‍್ಯಾಂಕ್), ಮಹಮ್ಮದ್ ರಿಹಾನ್ ವಾಲಿಕರ್ 97.33 ಪರ್ಸಂಟೈಲ್(ಒಬಿಸಿ 6068 ನೇ ರ‍್ಯಾಂಕ್), ಕಾರ್ತಿಕ್ ಬ್ಯಾಕೊಡ್ 97.04 ಪರ್ಸಂಟೈಲ್(ಜನರಲ್ ಇಡಬ್ಲುಎಸ್ 3800ನೇ ರ‍್ಯಾಂಕ್) ಸಂಪಾದಿಸಿದ್ದಾರೆ.
ಈವರೆಗೆ ನಡೆದ ಜೆಇಇ ಮೈನ್ 2022ರ ಒಟ್ಟು ಫಲಿತಾಂಶದಲ್ಲಿ 5 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ, 8 ವಿದ್ಯಾರ್ಥಿಗಳು 98 ಕ್ಕಿಂತ ಅಧಿಕ, 33 ವಿದ್ಯಾರ್ಥಿಗಳು 95 ಕ್ಕಿಂತ ಅಧಿಕ, ಒಟ್ಟು 59 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದು,ಒಟ್ಟು 88 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಡ್ ಗೆ ಅರ್ಹತೆ ಗಿಟ್ಟಿಸಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್‌ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿ, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.