ನವದೆಹಲಿ: ದೇಶದ 75 ನೇ ಸ್ವಾಂತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದು, ರಾಷ್ಟ್ರಧ್ವಜ ಮಾರಾಟ ಮಾಡುವ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಬದುಕು ಹಸನಾಗಿದೆ. ಇತಿಹಾಸದಲ್ಲೇ ಅತಿ ಹೆಚ್ಚು ರಾಷ್ಟ್ರಧ್ವಜ ಮಾರಾಟವಾಗುತ್ತಿದ್ದು ವ್ಯಾಪಾರಿಗಳ ಮೊಗದಲ್ಲಿ ಸಂತಸ ಮನೆ ಮಾಡಿದೆ.
ಹಿಂದೆಲ್ಲಾ ಜನರು ಒಂದೆರಡು ಧ್ವಜಗಳನು ಖರೀದಿಸುತ್ತಿದ್ದರು, ಆದರೆ ಹರ್ ಘರ್ ಅಭಿಯಾನದಿಂದಾಗಿ ಜನರು ಬೃಹತ್ ಆರ್ಡರ್ ಗಳನ್ನು ನೀಡುತ್ತಿದ್ದು, ಲಕ್ಷಗಟ್ಟಲೆ ಧ್ವಜಗಳು ಈಗಾಗಲೇ ಬಿಕರಿಯಾಗಿದ್ದು ಬೇಡಿಕೆ ಇನ್ನೂ ಹೆಚ್ಚುತ್ತಲೇ ಇದೆ. ರಾಷ್ಟ್ರಧ್ವಜಗಳ ಸರಬರಾಜು ಕಮ್ಮಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಧ್ವಜಗಳು ಮಾರಾಟವಾಗುವ ನಿರೀಕ್ಷೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮೊದಲೆಲ್ಲಾ 10-20 ಧ್ವಜಗಳು ಮಾರಾಟವಾಗುತ್ತಿದ್ದರೆ ಈಗ 10,000-50,000 ವರೆಗೆ ಮಾರಟವಾಗುತ್ತಿದೆ. ಸಗಟು ವಿತರಕರು ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಧ್ವಜಗಳನ್ನು ಮಾರಾಟ ಮಾಡಿದ್ದಾರೆ. ಈ ಬಾರಿ ಬೇಡಿಕೆ 1100-1200% ರಷ್ಟು ಹೆಚ್ಚಿದೆ, 15 ಆಗಸ್ಟ್ ವರೆಗೆ ಧ್ವಜಗಳನ್ನು ಪೂರೈಸಲು ಇನ್ನೂ ಹಲವು ಆರ್ಡರ್ ಗಳು ಬಂದಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಹರ್ ಘರ್ ತಿರಂಗಾ ಅಭಿಯಾನದಿಂದಾಗಿ ವ್ಯಾಪಾರಿಗಳು ಹಾಗೂ ಧ್ವಜ ನಿರ್ಮಾಣ ಮಾಡುವ ಕಾರ್ಮಿಕರು ಇಬ್ಬರ ಮೊಗದಲ್ಲೂ ಸಂತಸ ಮೂಡಿದೆ, ಬದುಕು ಹಸನಾಗಿದೆ.
"एक, दो नहीं, लाखों में demand है तिरंगे की" #HarGharTiranga pic.twitter.com/rMFvh6xYau
— Piyush Goyal (@PiyushGoyal) August 8, 2022












