ಕಿಚ್ಚ ಸುದೀಪ್ ಅಂದ್ರೆ ಹಾಗೇನೆ. ಯಾರೇ ತಪ್ಪು ಮಾಡಿದ್ರೂ ಅವರು ಯಾರನ್ನೂ ಬಿಡುವುದಿಲ್ಲ. ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ಅವರ ಸಂದರ್ಶನ ತೆಗೆದುಕೊಳ್ಳುತ್ತಿದ್ದಾಗ ನಿರೂಪಕಿಯು ‘ಕನ್ನಡ್’ ಎಂದು ಉಚ್ಛರಿಸಿರುವುದನ್ನು ಆಕ್ಷೇಪಿಸಿದ ಸುದೀಪ್, ಅದು ಕನ್ನಡ್ ಅಲ್ಲ ಕನ್ನಡ, ಸರಿಯಾಗಿ ಹೇಳಿ ಎಂದು ನಿರೂಪಕಿಯ ತಪ್ಪನ್ನು ಎತ್ತಿ ತೋರಿದ್ದಾರೆ.
ಯಾವ ರೀತಿ ಹಿಂದ್ ಎನ್ನುವುದು ಹಿಂದಿ ಆಗುವುದಿಲ್ಲವೋ ಅದೇ ರೀತಿ ಕನ್ನಡ ಅದು ಕನ್ನಡ್ ಆಗುವುದಿಲ್ಲ. ಇದಕ್ಕೆ ನಿರೂಪಕಿ ಅದನ್ನೇ ನಾವು ಕಲಿಯುತ್ತಾ ಇದ್ದೇವೆ ಎಂದಾಗ, ಪ್ರತಿಕ್ರಿಯಿಸಿದ ಕಿಚ್ಚ ಕಲಿಯಿರಿ, ಭಾಷೆ ಬಿಟ್ಟು ಬಿಡಿ, ನೀವು ಹೆಸರನ್ನಾದರೂ ಸರಿಯಾಗಿ ಹೇಳಿ. ನೀವು ತಮಿಳನ್ನು ಸರಿಯಾಗಿ ಹೇಳುತ್ತೀರಿ, ತೆಲುಗನ್ನು ಸರಿಯಾಗಿ ಹೇಳುತ್ತೀರಿ, ಆದರೆ ಕನ್ನಡದ ವಿಷಯಕ್ಕೆ ಬಂದಾಗ ಕನ್ನಡ ಹೇಳುವ ಬದಲು ಕನ್ನಡ್ ಎನ್ನುತ್ತೀರಿ. ಅದು ಕನ್ನಡ್ ಅಲ್ಲ ಕನ್ನಡ ಎಂದು ನಿರೂಪಕಿಗೆ ಕನ್ನಡ ಪಾಠ ಮಾಡಿ ಅಭಿಮಾನಗಳ ಹೃದಯ ಗೆದ್ದಿದ್ದಾರೆ.
Kannada – It's as simple, as beautiful as it sounds !
ಕನ್ನಡ ಅಂತ ಹೇಳಕ್ಕೆ ಅಂತಹ ಕಷ್ಟ ಎನ್ ಸ್ವಾಮಿ? pic.twitter.com/7IG2wnqwY8— Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 (@AshwiniMS_TNIE) August 3, 2022












