ಉಡುಪಿ: ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ 50 ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 15 ರಂದು ಸೋಮವಾರ ಬೆಳಗ್ಗೆ 09.00 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆಯಾಗಲಿದ್ದು, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಆಗಸ್ಟ್ 6 ರಿಂದ 14 ರ ವರೆಗೆ ಸಂಜೆ 4 ಗಂಟೆಗೆ ಆರಾಧನೆ, ಬಲಿಪೂಜೆ, ನೊವೆನಾ ಪ್ರಾರ್ಥನೆ ಮತ್ತು ವ್ಯಾಧಿಗ್ರಸ್ತರಿಗಾಗಿ ಪ್ರಾರ್ಥನೆ ಜರುಗಲಿದೆ. ಆಗಸ್ಟ್ 15 ಸೋಮವಾರದಂದು ಬೆಳಗ್ಗೆ 10.00 ಗಂಟೆಗೆ ಬಲಿಪೂಜೆ ಮತ್ತು 11.30 ಗಂಟೆಗೆ ಸುವರ್ಣಮಹೋತ್ಸವದ ಸಂಭ್ರಮಾಚರಣೆಗಳು ಜರುಗಲಿವೆ.
ಕಾರ್ಯಕ್ರಮಗಳ ನಂತರ ಮಧ್ಯಾಹ್ನ 1.00 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.