ಫಾಸಿಲ್ ನ ಹತ್ಯೆಗೆ ಬಳಸಲಾಗಿದ್ದ ಕಾರಿನೊಳಗೆ ಸಿಮ್ ಕಾರ್ಡ್, ರಕ್ತದ ಕಲೆಗಳು: ಹೆಚ್ಚಿನ ತನಿಖೆಗಾಗಿ ಆಗಮಿಸಲಿರುವ ವಿಧಿವಿಜ್ಞಾನ ತಂಡ

ಪಡುಬಿದ್ರೆ: ಸುರತ್ಕಲ್ ನ ಯುವಕ ಫಾಸಿಲ್ ನ ಹತ್ಯೆಗೆ ಬಳಸಲಾಗಿದ್ದ ಇಯಾನ್ ಕಾರು ಪಡುಬಿದ್ರೆ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ಕಾಜರಕಟ್ಟೆ ಅಶ್ವಥ ಕಟ್ಟೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು, ಕಾರೊಳಗೆ ಮೈಕ್ರೋ ಸಿಮ್, ಹಿಂಬದಿಯ ಸೀಟಿನಲ್ಲಿ ರಕ್ತದ ಕಲೆಗಳು, ನೀರಿನ ಬಾಟಲಿ ಮತ್ತು ಸ್ವಲ್ಪ ಹಣ ಪತ್ತೆಯಾಗಿದೆ ಎಂದು ಹೊಸದಿಗಂತ ವರದಿ ಮಾಡಿದೆ.

ಪಡುಬಿದ್ರೆ ಪೋಲಿಸರು ಕಾರಿಗೆ ಹೊದಿಕೆ ಮುಚ್ಚಿದ್ದು, ಹೆಚ್ಚಿನ ತನಿಖೆಗಾಗಿ ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ತಂಡವನ್ನು ಕಾಯಲಾಗುತ್ತಿದೆ.