ಬ್ರಹ್ಮಾವರ: ಭಾರತದಲ್ಲಿ ಅತ್ಯುತ್ತಮ ಹೆಸರು ಗಳಿಸಿದ ಟ್ರೇಡ್ ಬುಲ್ಸ್ ಕಂಪನಿಯ ಕ್ಯಾಂಪಸ್ ಸೆಲೆಕ್ಷನ್ ತಂಡವು ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಗೆ ಜುಲೈ 29 ರಂದು ಭೇಟಿ ನೀಡಿತು. ಟ್ರೇಡ್ ಬುಲ್ಸ್ ಕಂಪನಿಯ ಪ್ರತಿನಿಧಿಗಳಾದ ನಯಿಮ್ ಅಕ್ತರ್, ಮಹಮ್ಮದ್ಸಿನಾನ್, ಮಂಜುನಾಥ್ ಇವರುಗಳು ಆಗಮಿಸಿ, ಸಂಸ್ಥೆಯ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಒಳಪಡಿಸಿ ಒಟ್ಟು 16 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು. ಇದಲ್ಲದೆ ಸುಮಾರು 57 ವಿದ್ಯಾರ್ಥಿಗಳು ಟಿಸಿಎಸ್ ,ಅಪ್ ಸ್ಕಿಲ್ಸ್, ಅಮೆಜಾನ್, ಇಂಡಿಗೋ ಹೀಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಆಯ್ಕೆಯಾಗಿರುತ್ತಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಸುಬ್ರಮಣ್ಯ ವಹಿಸಿದ್ದರು. ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮಮತಾ , ಪ್ರಾಂಶುಪಾಲೆ ಶ್ರೀಮತಿ ಸೀಮ.ಜಿ.ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಗುರುಪ್ರಸಾದ್ ಹಾಗೂ ಸಂಸ್ಥೆಯ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.