ಉಡುಪಿ ಜಿಲ್ಲಾ ಭಾರತ ಸೇವಾ ದಳ ಸಂಸ್ಥೆ ಅಧ್ಯಕ್ಷ ಸ್ಥಾನ ಚುನಾವಣೆ: ಅಂಡಾರು ದೇವಿ ಪ್ರಸಾದ್ ಶೆಟ್ಟಿ ಅವಿರೋಧ ಆಯ್ಕೆ

ಉಡುಪಿ: ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಉಡುಪಿ ಜಿಲ್ಲಾ ಭಾರತ ಸೇವಾ ದಳ ಸಂಸ್ಥೆಗೆ 2022-27 ರ ಸಾಲಿಗೆ ಪದಾಧಿಕಾರಿಗಳ ಚುನಾವಣೆ ನಡೆದು ಅಧ್ಯಕ್ಷರಾಗಿ ಉಡುಪಿ ಜಿಲ್ಲಾ ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಹಾಗೂ ಉಪಾಧ್ಯಕ್ಷರಾಗಿ ಉಡುಪಿ ನಗರಸಭಾ ಸದಸ್ಯ ಗಿರೀಶ್ ಎಂ ಅಂಚನ್ ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಆರೂರು ತಿಮ್ಮಪ್ಪ ಶೆಟ್ಟಿ ಆಯ್ಕೆಗೊಂಡಿದ್ದು, ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ ಕಾರ್ಕಳ, ಹಾಗೂ ಖಜಾಂಚಿಯಾಗಿ ನಿವೃತ್ತ ಶಿಕ್ಷಕ ಹೆರಾಲ್ಡ್ ಡಿಸೋಜಾ, ಉಡುಪಿ ಆಯ್ಕೆಗೊಂಡಿರುತ್ತಾರೆ.

ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮಾಜಿ ಶಾಸಕ ಯು.ಆರ್ ಸಭಾಪತಿ, ಸುವರ್ಧನ ನಾಯಕ್, ಮಹಾಬಲ ಕುಂದರ್ , ಸುಬ್ರಹ್ಮಣ್ಯ ಬಾಸ್ರಿ ಉಡುಪಿ, ಶ್ರೀಮತಿ ಶ್ಯಾಮಲ ಸುಧಾಕರ, ಎಸ್ ದಿನಕರ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಾರಾಡಿ , ಗಣೇಶ್ ಶೆಟ್ಟಿ ಮಂದಾರ್ತಿ, ಶಿಕ್ಷಕ ಸದಸ್ಯರಾಗಿ ಶ್ರೀ ಕೃಷ್ಣ ಮೊಯ್ಲಿ ಕಾರ್ಕಳ , ಹಾಗೂ ಶ್ರೀಮತಿ ಜಯಲಕ್ಷ್ಮಿ ಬಿ.ಸಿ ಇವರುಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಭಾರತ ಸೇವಾ ದಳ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾ ಸಂಘಟಕ ಫಕೀರ್ ಗೌಡ ಹಳಮನಿ ತಿಳಿಸಿರುತ್ತಾರೆ.