ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಮತದಾರರ ನೋಂದಣಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 17 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತದಾರರ ಗುರುತಿನ ಚೀಟಿಗಾಗಿ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ಆಯೋಗ ಪ್ರಕಟಿಸಿದೆ.
ಈ ಮೊದಲು, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ನಾಗರಿಕರಿಗೆ ಜನವರಿ 1 ರಂದು 18 ವರ್ಷ ವಯಸ್ಸು ತುಂಬಬೇಕಾಗಿತ್ತು. ಈಗ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಯುವಕರು ಪ್ರತಿ ವರ್ಷ ನಾಲ್ಕು ಅವಕಾಶಗಳನ್ನು ಪಡೆಯುತ್ತಾರೆ. 17 ವರ್ಷಕ್ಕಿಂತ ಮೇಲ್ಪಟ್ಟ ನಾಗರೀಕರಿಗಾಗಿ ಮೂರು ಅರ್ಹತಾ ದಿನಾಂಕಗಳನ್ನು ಉಲ್ಲೇಖಿಸಿ – ಏಪ್ರಿಲ್ 01, ಜುಲೈ 01 ಮತ್ತು ಅಕ್ಟೋಬರ್ 01 ರಂದು ಸಲ್ಲಿಸಲು ಸಾಧ್ಯವಾಗುವಂತೆ ತಾಂತ್ರಿಕ-ಸಕ್ರಿಯಗೊಳಿಸಿದ ಪರಿಹಾರಗಳನ್ನು ರೂಪಿಸಲು ರಾಜ್ಯಗಳಿಗೆ ಭಾರತೀಯ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ.
ಇದರರ್ಥ ಒಬ್ಬ ವ್ಯಕ್ತಿಯು ನಾಲ್ಕು ದಿನಾಂಕಗಳಲ್ಲಿ ಯಾವುದಾದರೂ ಒಂದು (ಜನವರಿ 1, ಏಪ್ರಿಲ್ 1, ಜುಲೈ 1 ಅಥವಾ ಅಕ್ಟೋಬರ್ 1) ತಾರೀಖಿನಲ್ಲಿ 18 ವರ್ಷ ವಯಸ್ಸಿನವರಾಗಿದ್ದರೆ, ಅವರು ಮತದಾನಕ್ಕೆ ನೋಂದಾಯಿಸಿಕೊಳ್ಳಬಹುದು.
2023 ರ ಪ್ರಸ್ತುತ ಸುತ್ತಿನ ಮತದಾರರ ಪಟ್ಟಿಯ ವಾರ್ಷಿಕ ಪರಿಷ್ಕರಣೆಗಾಗಿ, 2023 ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ರೊಳಗೆ 18 ವರ್ಷ ವಯಸ್ಸಿನ ಯಾವುದೇ ನಾಗರಿಕರು ಕರಡು ಪ್ರಕಟಣೆಯ ದಿನಾಂಕದಿಂದ ಮತದಾರರ ಪಟ್ಟಿಯಲ್ಲಿ ಮತದಾರರಾಗಿ ನೋಂದಣಿಗಾಗಿ ಮುಂಗಡ ಅರ್ಜಿಯನ್ನು ಸಲ್ಲಿಸಬಹುದು ಎಂದು ಇಸಿಐ ಪ್ರಕಟಿಸಿದೆ.