ಸುಳ್ಯ: ಹಿಂದೂ ಕಾರ್ಯಕರ್ತ, ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಂಕೆಯ ಹಿನ್ನಲೆಯಲ್ಲಿ ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ತಡರಾತ್ರಿ ಕಾರ್ಯಕರ್ತರ ಮನೆಗೆ ಆಗಮಿಸಿದ ಪೊಲೀಸರು ಎಳು ಜನರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ವಶಕ್ಕೆ ಪಡೆದ ಎಲ್ಲಾ ಏಳು ಕಾರ್ಯಕರ್ತರು ಬೆಳ್ಳಾರೆ ಪರಿಸರದ ನಿವಾಸಿಗಳು ಎಂದು ತಿಳಿದು ಬಂದಿದೆ. ಪೊಲೀಸರು ಅಮಾಯಕರನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಎಸ್.ಡಿ.ಪಿ.ಐ ಸಂಘಟನೆಯು ಆರೋಪಿಸಿದೆ.