ಬೆಂಗಳೂರು: ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಶನಿವಾರ ಕೇರಳದ ಮೊಹಮ್ಮದ್ ಸಲ್ಮಾನ್ ಮತ್ತು ಬೆಂಗಳೂರಿನ ಮಿಥಿಲೇಶ್ ಎಂಬ ಇಬ್ಬರು ಬಾಲಕರನ್ನು ಕೆಲವು ಗಂಟೆಗಳ ಕಾಲ ಉಪ ಪೊಲೀಸ್ ಆಯುಕ್ತರನ್ನಾಗಿ (ಡಿಸಿಪಿ) ಮಾಡಲಾಯಿತು ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ಇದು ಪೊಲೀಸ್ ಅಧಿಕಾರಿಗಳಾಗುವ ಅವರ ಆಸೆಯನ್ನು ಈಡೇರಿಸುವ ಸಣ್ಣ ಪ್ರಯತ್ನವಾಗಿತ್ತು. ಈ ಇಬ್ಬರು ಹುಡುಗರು ಕ್ಯಾನ್ಸರ್ ರೋಗಿಗಳಾಗಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಮಕ್ಕಳ ಬದುಕಿನ ಬಗ್ಗೆ ಏನೂ ಹೇಳಲಾಗದಿದ್ದರೂ ಭವಿಷ್ಯದಲ್ಲಿ ಪೊಲೀಸರಾಗುವ ಅವರ ಕನಸನ್ನು ಕೆಲವೆ ಗಂಟೆಗಳ ಮಟ್ಟಿಗಾದರೂ ಪೂರೈಸಿದ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರ ಸಹೃದಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.