ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ 8 ರಿಂದ 14 ವರ್ಷದೊಳಗಿನ
ಮಕ್ಕಳ ಪ್ರತಿಭಾ ಪ್ರದರ್ಶನಕ್ಕಾಗಿ ಚಿಗುರು ಕಾರ್ಯಕ್ರಮ ಹಾಗೂ 15 ರಿಂದ 30 ವರ್ಷದೊಳಗಿನ ಯುವ ಕಲಾವಿದರಿಂದ ಯುವ ಸೌರಭ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕಲಾವಿದರು ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಜನಪದ ಕಲಾ ಪ್ರಕಾರ, ಸುಗಮ ಸಂಗೀತ, ಸಮೂಹ ನೃತ್ಯ, ನಾಟಕ, ಯಕ್ಷಗಾನ ಹಾಗೂ ಏಕಪಾತ್ರಾಭಿನಯ ಕಲಾಪ್ರಕಾರಗಳಿಗೆ ಜುಲೈ 31 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿನಗರ, ಮಣಿಪಾಲ ದೂ.ಸಂಖ್ಯೆ: 0820-2986168 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.