ಅಖಿಲ ಭಾರತ ಮಟ್ಟದ ಕೆವಿಪಿವೈ ಪರೀಕ್ಷೆಯಲ್ಲಿ ಎಕ್ಸ್ಪರ್ಟ್ ಕಾಲೇಜಿಗೆ 42 ರ‍್ಯಾಂಕ್

ಮಂಗಳೂರು: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸಿದ ಕಿಶೋರ್ ವೈಜ್ಞಾನಿಕ್ ಪೋತ್ಸಾಹನ್ ಯೋಜನೆಯ ಪರೀಕ್ಷೆಯ ಪರಿಷ್ಕೃತ ಪಲಿತಾಂಶವನ್ನು ಘೋಷಿಸಿದ್ದು, ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ 42 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಕೆ.ವಿ.ಪಿ.ವೈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಅದಿತ್ಯ ಕಾಮತ್ ಅಮ್ಮೆಂಬಳ ಅಖಿಲ ಭಾರತ ಮಟ್ಟದಲ್ಲಿ 127ನೇ ರ‍್ಯಾಂಕ್ ಹಾಗೂ ಶ್ರೇಯಸ್ ಕೆ. ನಿಶಾನಿ ಅಖಿಲ ಭಾರತ ಮಟ್ಟದಲ್ಲಿ 149ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕ್ಯಾಟಗರಿ ವಿಭಾಗದಲ್ಲಿ ವಿಶಾಲ್ ಎಸ್. 45ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ಸಾಥ್ವಿಕ್ ಎ.ಎಸ್., ಸ್ಕಂದ ಶಾನುಭಾಗ್, ಕೆ. ನಿಭಾ ಭಟ್, ವೃಷಭ್ ವಿ. ಜವಳಿ, ಪ್ರಣವ್ ಎಸ್., ಸ್ನೇಹಲ್ ಮಹಿಮ ಕ್ಯಾಸ್ಟಲಿನೊ, ಅಭಿಷೇಕ್ ಪ್ರಕಾಶ್ ಕಲ್ಯಾಣ್‌ಶೆಟ್ಟಿ, ದಿಶಾಂತ್ ಕೆ., ಶ್ರೀಹರಿ ಮಂಕಣಿ, ಪ್ರಜ್ಞಾ ಬಿ. ಶೆಟ್ಟಿಗಾರ್, ದಿಶಾ ಎನ್., ಯಶಸ್ವಿನಿ ಎಸ್. ಬಾಳಪ್ಪನವರ್, ಅರುಣ್ ದೇವ್ ಕೆ. ಎಚ್., ಸಂಜನಾ ಪಿ. ವಿ. , ಕಶ್ವಿ ಬಿ.ಕೆ., ಶ್ರೀ ಸಂಪತ್ ಎಸ್.ಡಿ., ಮಹಮದ್ ರಫೀಕ್ ಎ. ಸುತಾರ್, ರೋಹನ್ ಎನ್. ಪಾಟೀಲ್, ದೀಪಕ್ ರಾಜ್ ಡಿ., ಪೃಥ್ವಿ ಎಂ., ಯಶಸ್ ಎಸ್. ಜೆ., ಅಜಯ್ ಎಸ್. ಹೆಗಡೆ, ನವ್ಯಾ ಆರ್. ಎನ್., ನಮಿತಾ ಎನ್., ಇಶಾನ್ಯಾ ಬಿ.ಯು., ಅಮೀನ್ ಹುಸೇನ್, ತುಬಾಚಿ ಕೃತಿಕ್ ಚನ್‌ಗೌಡ, ನೇಹಾ ಸಬಾದಿ, ಚಿನ್ಮಯ್ ಕೆ. ಮಠ್, ಮುರುಗೇಶ್ ಪಟೇಲ್ ಕೆ. ಆರ್., ಸುಹಾಸ್ ಬಿ.ಎಸ್., ಭಾರ್ಗವ್ ಸದರಿ, ಸಿಯಾ ದಯಾನಂದ ಚೌಟ, ತೇಜಸ್ ಕೆ. ರೈಸಾದ್, ಅಕ್ಷಜ್ ಎಸ್.ಆರ್., ಎಸ್. ಸೌಬಿಹ, ಮದನ್ ಗೌಡ ಎಂ., ಹಿಮಾಂಶು ಎಲ್., ವಿವೇಕ್ ವಿ.ಎಂ. ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.

ಕೆವಿಪಿವೈ ರ‍್ಯಾಂಕ್ ವಿಜೇತರಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್.ನಾಯಕ್ ಅಭಿನಂದಿಸಿದ್ದಾರೆ.