ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ಕೌಂಡಿಣ್ಯ ಗೋತ್ರ ನಾಯಕ ಕುಲಪುರಷ ಕಮಿಟಿ ರಮಾನಾಥ್ ಗೋವಾ ಹಾಗೂ ದಿವಂಗತ. ಬಿ.ಜಯರಾಮ್ ನಾಯಕ್ ಮೆಮೋರಿಯಲ್ ಸ್ಮರಣಾರ್ಥವಾಗಿ ಹತ್ತನೇ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ 9 ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಭಾನುವಾರದಂದು ಉಡುಪಿ ಒಳಕಾಡಿನ ಅನಂತ ವೈದಿಕ ಕೇಂದ್ರದಲ್ಲಿ ಜರುಗಿತು.

ಟ್ರಸ್ಟ್ ನ ಅಧ್ಯಕ್ಷ ಮೋಹನ್ ನಾಯಕ್ ಬೆಳಗಾಂ, ಪ್ರತಿ ವಿದ್ಯಾರ್ಥಿಗೂ 5000ರೂ ನಗದು ಸಹಿತ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅಜೆಕಾರ್ ಪ್ರೇಮಾನಂದ್ ನಾಯಕ್, ರಾಧಾಕೃಷ್ಣ ನಾಯಕ್ ಅಂಬಾಗಿಲು, ಶ್ರೀಧರ್ ನಾಯಕ್ ಕಾರ್ಕಳ, ಕಮಲಾಕ್ಷ ನಾಯಕ್ ಕುಕ್ಕುಂದೂರ್, ಉಮೇಶ್ ನಾಯಕ್ ಉಡುಪ, ಅಶೋಕ ನಾಯಕ್ ಕಾರ್ಕಳ, ಡಾ ಕೃಷ್ಣಾನಂದ ನಾಯಕ್ ನಗರಮಠ, ಅಶೋಕ್ ನಾಯಕ್ ಅಂಬಾಗಿಲು, ಚಂದ್ರಕಾಂತ ನಾಯಕ್ ಮಣಿಪಾಲ, ಶ್ರೀಪತಿ ನಾಯಕ್ ಕಾರ್ಕಳ, ರಾಮ ಮೋಹನ್ ನಾಯಕ್ ಹಾಗೂ ಸಮಾಜ ಬಾಂಧವರು ಉಪಸ್ತಿತರಿದ್ದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಕೇದಾರ್ ನಾಯಕ್, ಅಕ್ಷತಾ ನಾಯಕ್, ರಕ್ಷಾ ನಾಯಕ್ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಭವ್ಯ ನಾಯಕ್, ಪ್ರಥ್ವಿ ನಾಯಕ್, ಸಂಜನಾ ಕಾಮತ್, ಶ್ರವಣ್ ನಾಯಕ್, ರಾಮನಾಥ್ ನಾಯಕ್, ವಾಸವಿ ನಾಯಕ್ ಇವರನ್ನು ಸನ್ಮಾನಿಸಲಾಯಿತು.