ಬೆಂಗಳೂರು: ಇಲ್ಲಿ ಜುಲೈ 16 ರಂದು ನಡೆದ ಒಕ್ಕೂಟದ ದ್ವೈವಾಷಿ೯ಕ ಅಧಿವೇಶನದಲ್ಲಿ ನವೀನ್ ಚಂದರ್ ಮೂಳೂರು ಅವಿರೋಧವಾಗಿ ಆಯ್ಕೆಯಾದರು. ಇವರು ಉಡುಪಿ ಅಂಚೆ ವಿಭಾಗದಲ್ಲಿ ಅಂಚೆ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಈ ಹಿಂದೆ ದೆಹಲಿಯ ಡೈರೆಕ್ಟರೇಟ್ ನಲ್ಲಿ ಸಹಾಯಕ ಅಂಚೆ ನಿರ್ದೇಶಕರಾಗಿ ಮತ್ತು ಶಿವಮೊಗ್ಗದಲ್ಲಿ ಅಂಚೆ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಸಹಾಯಕ ಅಧೀಕ್ಷಕರಾಗಿದ್ದಾಗ ಅಂಚೆ ನಿರೀಕ್ಷರ ಮತ್ತು ಸಹಾಯಕ ಅಧೀಕ್ಷಕರ ಕರ್ನಾಟಕ ವ್ಯತ್ತದ ಒಕ್ಕೂಟದ ಕಾರ್ಯದರ್ಶಿಯಾಗಿ, ರಾಜ್ಯಧ್ಯಕ್ಷರಾಗಿ ಮತ್ತು ರಾಷ್ಟ್ರೀಯ ಮಟ್ಟದ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ.