ಕಾರ್ಕಳ: ಸಿಂಧೂರ ನಾಟಕ ತಂಡದಿಂದ ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ: ದಿನಾಂಕ 17 ಜುಲೈ ಭಾನುವಾರ ಕಾರ್ಕಳ ಬಂಡಿಮಠದ ಮೂಡು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಿಂಧೂರ ಕಲಾವಿದೆರ್ ಕಾರ್ಲ ಇವರ 7 ನೇ ವರ್ಷದ ಸಂಭ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಆಮಂತ್ರಣ ಪರಿವಾರ ಅಳದಂಗಡಿ ಇದರ ಸಂಸ್ಥಾಪಕರಾದ ವಿಜಯ್ ಕುಮಾರ್ ಜೈನ್ ಉದ್ಘಾಟಿಸಿ ನಾಟಕ ತಂಡದ ಇಂತಹ ಸಾಮಾಜಿಕ ಕಾರ್ಯಕ್ರಮ ಶ್ಲಾಘನೀಯ ಎಂದರು. ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತೀರುವ ಸಿಂಧೂರ ನಾಟಕ ತಂಡ ರಾಜ್ಯಕ್ಕೆ ಮಾದರಿ ಎಂದರು. ಧರ್ಮಗುರುಗಳಾದ ಡೊಮಿನಿಕ್ ವೇಗಸ್ ಇಂದೋರ್ ಮಾತನಾಡಿ ಮಕ್ಕಳು ಈ ವಿದ್ಯಾರ್ಥಿ ವೇತನವನ್ನು ಪ್ರಸಾದ ಎಂದು ಸ್ವೀಕರಿಸಿ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದರು.

ಪುರಸಭಾ ಸದಸ್ಯ ಶುಭದ ರಾವ್ ಮತಾನಾಡಿ ನಾಟಕ ತಂಡವೊಂದು ತನ್ನ ವಾರ್ಷಿಕೋತ್ಸವನ್ನು ವಿದ್ಯಾರ್ಥಿ ವೇತನದಂತಹ ಕಾರ್ಯಕ್ರಮ ಹಮ್ಮಿಕೊಂಡು ಬಡಮಕ್ಕಳ ವಿದ್ಯಾಬ್ಯಾಸಕ್ಕೆ ಸಹಕಾರ ನೀಡುತ್ತೀರುವುದು ಶ್ಲಾಘನೀಯ ಎಂದರು. ಆಮೇಲೆ ನಾಟಕ ರಂಗ ಪ್ರಶಸ್ತಿ ಪಡೆದ ಚಂದ್ರಹಾಸ್ ಸುವರ್ಣ, ಕಾಮಿಡಿ ಗ್ಯಾಂಗ್ಸ್ ವಿಜೇತ ರಾಜೇಶ್ ದಾನಶಾಲೆ ಮತ್ತು ಸವಿತಾ ರಾಜೇಶ್. ಕಲಾಪೋಷಕರಾದ ಜೂಲಿಯಾ ಸ್ಟ್ಯಾನಿ ಡಿಸೊಜಾ, ಯಕ್ಷ ಪ್ರೇಮಿ ಸುಕುಮಾರ್ ಜೈನ್ ಇವರಿಗೆ ಸನ್ಮಾನಿಸಲಾಯಿತು. ಹಾಗೂ ದಾನಿಗಳಿಗೆ ಗೌರವ ಸಮ್ಮಾನವನ್ನು ನೀಡಲಾಯಿತು. ಈ ವರ್ಷ SSLC ಮತ್ತು PUC ಅಧಿಕ ಪಡೆದು ಉತ್ತೀರ್ಣರಾದ 25 ಬಡಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಈ ಸಮಯದಲ್ಲಿ ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಶುಭದ ರಾವ್, ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಪ್ರಭಾಕರ್ ಕಲ್ಯಾಣಿ, ಅಶೋಕ್ ಮಡಿವಾಳ ಕಾರ್ಕಳ, ಜೇರಾಲ್ಡ್ ಡಿಸಿಲ್ವಾ ಮಿಯ್ಯಾರು, ಅಶೋಕ್ ಪೊಸಲಾಯಿ, ತಂಡದ ಸಾರಥಿ ಲೀಲಾವತಿ ಪೊಸಲಾಯಿ, ಹಿರಿಯ ನಟ ರವೀಂದ್ರ ಶಾಂತಿ ಪುಲ್ಕೇರಿ ಉಪಸ್ಥಿತರಿದ್ದರು. ತಂಡದ ಸದಸ್ಯರಾದ ಅನಿಲ್ ಕಾಬೆಟ್ಟು, ಹಮೀದ್ ಮಿಯ್ಯಾರು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಪ್ರವೀಣ್ ನೆಲ್ಲಿಕಟ್ಟೆ ಸ್ವಾಗತಿಸಿ ತಾರಾನಾಥ್ ಬೊಳ ವರದಿ ವಾಚಿಸಿ, ವಿಠ್ಠಲ್ ಅಮೀನ್ ಪುಲ್ಕೇರಿ ಧನ್ಯವಾದ ಸಮರ್ಪಿಸಿದರು, ಸಂದೀಪ್ ಬಾರಾಡಿ ಕಾರ್ಯಕ್ರಮ ನಿರೂಪಿಸಿದರು.