ಉಡುಪಿ, ಮೇ 9: 8 ನೇ ಶತಮಾನದಲ್ಲಿ ಹಲವು ಧರ್ಮಗಳ ಸವಾಲಿನ ನಡುವೆ ಹಿಂದೂ ಧರ್ಮವನ್ನು ರಕ್ಷಿಸುವಲ್ಲಿ ಶಂಕರಾಚಾರ್ಯರು ಮಹತ್ವದ ಕಾರ್ಯಗಳ ಮೂಲಕ ಹಿಂದೂ ಧರ್ಮ ರಕ್ಷಿಸಿದ್ದರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು.
ಅವರು ಗುರುವಾರ, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಡೆದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅದ್ವೈತ ಧರ್ಮ ಪ್ರತಿಪಾದಿಸಿದ ಶಂಕರಚಾರ್ಯರು ಕೇವಲ 32 ವರ್ಷ ಮಾತ್ರ ಜೀವಿಸಿದ್ದು, ತಮ್ಮ ಜೀವಿತಾವಧಿಯಲ್ಲಿ ಇಡೀ ಭಾರತ ದೇಶವನ್ನು ಸುತ್ತಿ, ಇತರೆ ಧರ್ಮಗಳ ನಡುವೆ ಕಳೆದುಹೋಗುವ ಹಂತದಲ್ಲಿದ್ದ, ಹಿಂದೂ ಧರ್ಮದ ಉಳಿವಿಗಾಗಿ ದೇಶದ 4 ಮೂಲೆಗಳಲ್ಲಿ ಪೀಠಗಳನ್ನು ಸ್ಥಾಪಿಸುವ ಮೂಲಕ, ಹಿಂದೂ ಧರ್ಮವನ್ನು ರಕ್ಷಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ಅದ್ವೈತ ಬಳಗದ ಸದಸ್ಯ, ಪತ್ರಕರ್ತ ಕಿರಣ್ ಮಂಜನಬೈಲು, ಸನಾತನ ಹಿಂದೂ ಧರ್ಮಕ್ಕೆ ಆಘಾತವಾಗಿದ್ದ ಸಮಯದಲ್ಲಿ ಹಿಂದೂ ಧರ್ಮದ ಪುನರುತ್ಥಾನ ಮಾಡಿದ ಶಂಕರಾಚಾರ್ಯರು, ಅದ್ವೈತ ತತ್ವವನ್ನು ಎತ್ತಿ ಹಿಡಿದರು, ಅದ್ವೈತ ಎಂದರೆ ಎರಡಲ್ಲ ಒಂದು ಎಂದು, ಎಲ್ಲರೊಳಗೂ ಇರುವ ದೇವರು ಒಬ್ಬನೇ ಎಂದ ಮೇಲೆ ಧರ್ಮ ಧರ್ಮಗಳ ನಡುವೆ ಸಮಾನತೆ ಇರಬೇಕು ಎಂದು ಸಮಾನತೆ ತತ್ವವನ್ನು ಪ್ರತಿಪಾದಿಸಿದ್ದರು, ಹಿಂದೂ ಧರ್ಮದ ರಕ್ಷಣೆಗಾಗಿ ದೇಶದ 4 ಮೂಲೆಗಳಲ್ಲಿ ಪೀಠಗಳನ್ನು ಪ್ರಾರಂಭಿಸಿದ್ದರು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಪೂರ್ಣಿಮಾ ಸ್ವಾಗತಿಸಿದರು, ಶಂಕರದಾಸ್ ನಿರೂಪಿಸಿ, ವಂದಿಸಿದರು.