ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಪಂಕಜ್‌ ಭಟ್‌ಗೆ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ 16 ನೇ ಸ್ಥಾನ 

ಉಡುಪಿ: ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪಂಕಜ್‌ ಭಟ್‌ ಗೆ ಓರಿಸ್ಸಾದ ಭುವನೇಶ್ವರದಲ್ಲಿ ನಡೆದ 2022 ರ 32ನೇ ಸಾಲಿನ 17 ವರ್ಷದ ಒಳಗಿನ ವಯೋಮಿತಿಯ ಮುಕ್ತ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ ಶಿಪ್ ನಲ್ಲಿ 16ನೇ ಸ್ಥಾನ ಗಳಿಸಿದ್ದಾನೆ.

ಪಂಕಜ್‌ ಭಟ್‌ ಪುತ್ತೂರಿನ ವೈದ್ಯರಾದ ಡಾ. ಮಹಾಲಿಂಗೇಶ್ವರ ಪ್ರಸಾದ್‌ ಭಟ್‌ ಮತ್ತು ಪಾವನ ಪ್ರಸಾದ್‌ ರವರ ಸುಪುತ್ರರಾಗಿದ್ದು, ವಿದ್ಯಾರ್ಥಿಯ ಈ ಅಮೋಘ ಸಾಧನೆಯನ್ನು ಕ್ರಿಯೇಟಿವ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.