ಮಂಗಳೂರು: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪನಿಗಳ ನೇರ ಸಂದರ್ಶನವನ್ನು ಜುಲೈ 15 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಆಯೋಜಿಸಲಾಗಿದೆ. ಹತ್ತನೇ ತರಗತಿ, ಪದವಿ ಪೂರ್ವ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಸ್ವ ವಿವರವುಳ್ಳ ಬಯೋಡೇಟಾದೊಂದಿಗೆ ನಗರದ ಮಂಗಳೂರು ಮಹಾನಗರ ಪಾಲಿಕೆ ಕಟ್ಟದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಮ್ಮಿಕೊಂಡಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಪ್ಲಾಂಟ್ ಟೆಕ್ ಇಂಡಸ್ಟ್ರಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಈಶ ಮೋಟಾರ್ಸ್, ರಾಂಡ್ ಸ್ಟಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮೆಡ್ ಪ್ಲಸ್, ಕಾಂಚನ ಹುಂಡೈ ಹಾಗೂ ಕೊಜೆಂಟ್ ಇ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮುಂತಾದ ಕಂಪನಿಗಳು ಭಾಗವಹಿಸಲಿವೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0824-2457139 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ತಿಳಿಸಿದೆ.