ಉಡುಪಿ: ಇಲ್ಲಿನ ಬೇಸ್ ಸಂಸ್ಥೆಯಲ್ಲಿ ಕಲಿಯುತ್ತಿರುವ ಕ್ಲಾಸ್ ರೂಂ ವಿದ್ಯಾರ್ಥಿ ಪ್ರಥಮ್ ಶೆಟ್ಟಿ ಜೆ.ಇ.ಇ ಮೈನ್ಸ್ ನಲ್ಲಿ 99.03 ಪರ್ಸಂಟೈಲ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ತಪಸ್ ಬೇಸ್ ಸಂಸ್ಥೆಯ ವಿದ್ಯಾರ್ಥಿಗಳಾದ ಯು ಸ್ಕಂದ ಐತಾಳ್ 99.91 ಪರ್ಸಂಟೈಲ್, ಲಿಖಿತ್ ಆರ್ 99.63 ಪರ್ಸಂಟೈಲ್, ಪ್ರಕಾಶ್ ಗೌಡ ಟಿ. ಆರ್ 99.37 ಪರ್ಸಂಟೈಲ್, ಕಾರ್ಥಿಕ್ ಸತೀಶ್ 99.27 ಪರ್ಸಂಟೈಲ್, ಸಾಯಿ ಚಿರಂಥನ್ ಹೆಚ್.ಎಮ್ 98.50 ಪರ್ಸಂಟೈಲ್, ಸಾಗರ್ ಎಸ್ ಅಥಣಿ 98.47 ಪರ್ಸಂಟೈಲ್, ಚನ್ನಪ್ಪ ಕಲಹಳ್ 98.01 ಪರ್ಸಂಟೈಲ್ ಗಳಿಸಿ ಸಾಧನೆ ಮಾಡಿದ್ದಾರೆ. ಒಟ್ಟು 16 ವಿದ್ಯಾರ್ಥಿಗಳು 90 ಪರ್ಸಂಟೈಲ್ ಗಿಂತ ಅಧಿಕ ಅಂಕಗಳಿಸಿ ಸಂಸ್ಥೆಗೆ ಹೆಸರು ತಂದಿದ್ದಾರೆ.
ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಅಧ್ಯಾಪಕ ವೃಂದದವರು ಆತನನ್ನು ಅಭಿನಂದಿಸಿದ್ದಾರೆ.