ಉಡುಪಿ: ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಶುಭಾಶೀರ್ವಾದದೊಂದಿಗೆ ಶ್ರೀ ಕೃಷ್ಣ ಸೇವಾ ಬಳಗದ ವತಿಯಿಂದ ಶ್ರೀ ಪೂರ್ಣಪ್ರಜ್ಞಾ ಆಡಿಟೋರಿಯಂನಲ್ಲಿ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪಾಂಡಿಚೇರಿಯ ಋಷಿ ಧರ್ಮ ಫೌಂಡೇಶನಿನ ಅಧ್ಯಕ್ಷರಾದ ಪ್ರವಚನ ಭಾಸ್ಕರ ಶ್ರೀ ಡಿ.ಎ ಜೋಸೆಫ್ ಇವರಿಂದ ವ್ಯಕ್ತಿತ್ವ ವಿಕಸನದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.