ಕಾರ್ಕಳ: ಜಿಲ್ಲೆಯಲ್ಲಿ ಸುರಿಯುತ್ತಿರ ಧಾರಾಕಾರ ಮಳೆಯಿಂದಾಗಿ ಹೆಬ್ರಿ ತಾಲೂಕಿನ ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಸುಮಾರು 30 ಮೀಟರ್ ಭೂಕುಸಿತ ಉಂಟಾಗಿದ್ದು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ವಾಹನ ಸಂಚಾರ ಪುನಃ ಸ್ಥಾಪಿಸಲು ಸುಮಾರು 3 ಗಂಟೆಗಳ ಸಮಯ ಹಿಡಿಯಬಹುದೆಂದು ಅಂದಾಜಿಸಲಾಗಿದೆ. ತೆರವು ಕಾರ್ಯಾಚರಣೆ ಪ್ರಗತಿಯಲ್ಲಿರುವುದರಿಂದ ಪ್ರಯಾಣಿಕರು ಬದಲಿ ಮಾರ್ಗ ಉಪಯೋಗಿಸುವುದು ಸೂಕ್ತ ಎನ್ನಲಾಗಿದೆ.