ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಪರಿಸರ ರಾಯಭಾರಿ: ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ

 

ಬೆಂಗಳೂರು: ಕರ್ನಾಟಕದ ವೃಕ್ಷ ಮಾತೆ, ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತೆ, ಸಾಲು ಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯಾಗಿ ನೇಮಿಸಿ, ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ತಿಮ್ಮಕ್ಕ ಪರಿಸರ ರಾಯಭಾರಿಯಾಗಿರುವುದರಿಂದ ರಾಜ್ಯ ಯಾ ಅಂತಾರಾಜ್ಯ ಪ್ರವಾಸ ಕೈಗೊಂಡಾಗ ಅದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಅವರಿಗೆ ಈಗಾಗಲೇ ನೀಡಿರುವ ಬಿಡಿಎ ನಿವೇಶನದಲ್ಲಿ ಸರ್ಕಾರವೇ ಮನೆ ಕಟ್ಟಿಸಿಕೊಡಲಿದೆ. ಜತೆಗೆ ಸರ್ಕಾರ ಹತ್ತು ಎಕರೆ ಜಮೀನು ನೀಡಲಿದೆ ಎಂದು ಪ್ರಕಟಿಸಿಲಾಗಿದೆ. ತಿಮ್ಮಕ್ಕ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಬಗ್ಗೆ ವೆಬ್‌ಸೈಟ್‌ ಮತ್ತು ತಿಮ್ಮಕ್ಕ ಸೇರಿದಂತೆ ರಾಜ್ಯದಲ್ಲಿರುವ ಇತರ ಸಾಧಕರನ್ನು ಪರಿಚಯಿಸುವ ವೆಬ್‌ ಸೀರಿಸ್‌ ರೂಪಿಸುವಂತೆ ಮುಖ್ಯಮಂತ್ರಿ ಬೊಮಾಯಿ ಈಗಾಗಲೇ ವಾರ್ತಾ ಇಲಾಖೆಗೆ ಸೂಚಿಸಿದ್ದಾರೆ.