ಕಣ್ಣು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಭಾಗ. ಎಷ್ಟು ಸೂಕ್ಷ್ಮವೋ ಅಷ್ಟೇ ಸುಂದರವೂ ಕೂಡ.ಆದರೆ ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ಹೆಚ್ಚಿನವರಿಗೆ ಮಾಹಿತಿ ಇಲ್ಲ. ಇಲ್ಲಿ ವೈದ್ಯೆ ಹರ್ಷಾ ಕಾಮತ್ ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಬೇಕು ಎನ್ನುವ ಕುರಿತು ಪ್ರಮುಖ ಟಿಪ್ಸ್ ಗಳನ್ನು ನೀಡಿದ್ದಾರೆ. ನಿಮ್ಮ ಕಣ್ಣು ಸುಂದರವಾಗಿರಬೇಕು, ಯಾವ ಸಮಸ್ಯೆಯೂ ಕಣ್ಣಿಗೆ ಬರಬಾರದು ಎನ್ನುವ ಕಾಳಜಿ ನಿಮ್ಮಗಿದ್ದಲ್ಲಿ ಈ ಟಿಪ್ಸ್ ಅನ್ನು ಫಾಲೋ ಮಾಡಲು ಮರೆಯಬೇಡಿ.
ಕಣ್ಣಿನ ದೋಷಗಳಿಗೆ ಕಾರಣ ಏನ್ ಗೊತ್ತಾ?
*ಬೇಸಿಗೆಯಲ್ಲಿ ಬಿಸಿಲಿನ ಶಾಖ, ಟಿವಿ, ಕಂಪ್ಯೂಟರ್, ಮೊಬೈಲ್ ವೀಕ್ಷಣೆ, ಪರಿಸರ ಮಾಲಿನ್ಯಗಳಿಂದ ಕಣ್ಣಿನ ದೃಷ್ಟಿ ಮಂದವಾಗುತ್ತದೆ ಹಾಗು ಕನೆಕ್ಟ್ ವೈಟೇಜ್ ಬರುವ ಸಾಧ್ಯತೆ ಅಧಿಕ.
ವಾತ ದೋಷದಿಂದ – ಕಣ್ಣುಗಳ ಶುಷ್ಕತೆ, ಒರೆಗಣ್ಣು ಪಿತ್ತ ದೋಷದಿಂದ -ಉರಿ ಊತ
ಕಫ ದೋಷದಿಂದ -ಕ್ಯಾಟರ್ಯಾಕ್ಟ್ ,ಗ್ಲುಕೋಮಾ ಬರುತ್ತದೆ.
ಆರೋಗ್ಯಕರ ಕಣ್ಣಿಗಾಗಿ ಹೀಗೆ ಮಾಡಿ:
*ಬೆಳಿಗ್ಗೆ ಎದ್ದ ತಕ್ಷಣ ಬಾಯಿಗೆ ನೀರು ಹಾಕಿ ಅದೇ ಸಮಯಕ್ಕೆ ಕಣ್ಣಿಗೆ ನೀರು ಸಿಂಪಡಿಸಿರಿ .
*.ಮನೆಯಲ್ಲಿ ತಯಾರಿಸಿದ ರೋಸ್ ವಾಟರ್ ಅನ್ನು ಪ್ರತಿ ಕಣ್ಣಿಗೆ ಎರಡು ಡ್ರಾಪ್ಸ್ ಹಾಕಿರಿ. ಇದು ಕಣ್ಣಿಗೆ ಉತ್ತಮ.
*ಹಸುವಿನ ಹಾಲು ಪ್ರತಿ ಕಣ್ಣಿಗೆ ಎರಡು ಡ್ರಾಪ್ಸ್ ಹಾಕಿದರೆ ಕಣ್ಣುಗಳು ಶುಚಿ ಹಾಗೂ ಕಣ್ಣಿನ ಉರಿ ಕಮ್ಮಿಯಾಗುವುದು .
*.ರಾತ್ರಿ ಒಂದು ಕಪ್ ನೀರಿಗೆ ೧/೨ ಚಮಚ ಕೊತ್ತೊಂಬರಿ ಬೀಜ ನೆನೆಸಿಟ್ಟು ಬೆಳಿಗ್ಗೆ ಈ ನೀರನ್ನು ಸೋಸಿ ಕಣ್ಣನ್ನು ತೊಳೆದರೆ ಕಣ್ಣಿಗೆ ಹಿತ. ವರ್ಷಕ್ಕೊಮ್ಮೆ eye checkup ಮಾಡಿಸಿರಿ. ಹೈ ಬಿಪಿ ಹಾಗೂ ಡಯಾಬಿಟಿಸ್ ಇದ್ದವರಿಗೆ ಇದು ಬಹಳ ಅತ್ಯಗತ್ಯ .
*. ಅನುಲೋಮ ವಿಲೋಮ ಪ್ರಾಣಾಯಾಮ, ಭಸ್ತ್ರಿಕಾ, ಕಪಾಲ ಭಾತಿ ,ತ್ರಾಟಕ ಹಾಗೂ ಕೆಲವು ಐ ರೊಟೇಷನ್ ಎಕ್ಸಸೈಜ್ ಮಾಡಿದರೆ ಒಳ್ಳೆಯದು .
* ಕ್ಯಾರೆಟ್, ಪಾಲಕ್ ,ಹಾಲು, ಮೊಸರು ,ಹುಳಿ ಹಣ್ಣುಗಳಾದ ನಿಂಬೆ ಹಣ್ಣು,ಆರೆಂಜ್, ಆಮ್ಲಾ, ಬಾದಾಮ್, ಹಾಗೂ ನೀರನ್ನು ಹೆಚ್ಚಾಗಿ ಸೇವಿಸಿರಿ .
ಇದನ್ನು ಮಾಡಬೇಡಿ –
*ಪ್ರಖರವಾದ ಬಿಸಿಲಿಗೆ ಹೋಗಬೇಡಿ. ಅನಿವಾರ್ಯವಾದರೆ ಗಾಗಲ್ಸ್ ಅಥವಾ ಛತ್ರಿಯನ್ನು ಉಪಯೋಗಿಸಿರಿ.
*ಕಡಿಮೆ ನಿದ್ದೆ ಮಾಡಬಾರದು. ದಿನ ನಿತ್ಯ ಎಂಟು ಗಂಟೆ ನಿದ್ದೆ ಅವಶ್ಯಕ .
*ಕಣ್ಣನ್ನು ಉಜ್ಜುವುದು ಮಾಡಬಾರದು .
*ಬಿಸಿಲಿನಿಂದ ಮನೆಗೆ ಬಂದ ತಕ್ಷಣ ಕಣ್ಣನ್ನು ತೊಳೆಯಬೇಡಿ.
*ಕಡಿಮೆ ಬೆಳಕಿನಲ್ಲಿ ಓದುವುದು ಕಣ್ಣಿಗೆ ಹಾನಿಯುಂಟು ಮಾಡುತ್ತದೆ
* ಚಲಿಸುವ ವಾಹನದಲ್ಲಿ ಓದುವುದು ಅಹಿತ
* ದಿನನಿತ್ಯ ಐ ಮೇಕಪ್ ಮಾಡಿಕೊಳ್ಳುವುದರಿಂದ ಕಣ್ಣಿಗೆಹಾನಿ.