ಉಡುಪಿ/ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದ.ಕ ಮತ್ತು ಉ.ಕನ್ನಡದಲ್ಲಿ ಅತ್ಯಾಧಿಕ ಮಳೆ ಬೀಳುವ ಸಂಭವವಿರುವ ನಿಟ್ಟಿನಲ್ಲಿ ತ್ರಿವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ 115.6 ಮೀ.ಮೀ ನಿಂದ 204 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗಿನ ವ್ಯಾಪ್ತಿಯಲ್ಲಿ 3.5 – 4.8 ಮೀಟರ್ ಎತ್ತರದ ಅಲೆಗಳನ್ನು ಊಹಿಸಲಾಗಿದೆ. ಪ್ರಸ್ತುತ ವೇಗವು 50 – 80ಸೆಂ.ಮೀ/ಸೆಕೆಂಡ್ ರ ನಡುವೆ ಬದಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಉಭಯ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮನೆ ಕುಸಿತ, ಗುಡ್ಡೆ ಜರಿಯುವಿಕೆ, ಕೃತ ನೆರೆ, ಮನೆ ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡು ಜನರ ಜೀವನ ದುರ್ಭರವಾಗಿದೆ.