ಎನ್.ಇ.ಎಸ್.ಟಿ -2022: ಜ್ಞಾನಸುಧಾ ಕಾಲೇಜಿನ ಮೂರು ವಿದ್ಯಾರ್ಥಿಗಳಿಗೆ ರ‍್ಯಾಂಕ್

ಕಾರ್ಕಳ: ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಸೈನ್ಸ್ ಎಜ್ಯುಕೇಶನ್‌ ಮತ್ತು ರಿಸರ್ಚ್(ಎನ್.ಐ.ಎಸ್.ಇ.ಆರ್) ಭುವನೇಶ್ವರ್ ಹಾಗೂ ಬಾಂಬೆ ಯುನಿವರ್ಸಿಟಿ ಜಂಟಿಯಾಗಿ ನಡೆಸಿದ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ನೆಸ್ಟ್-2022 ರಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಆರ್ಯ.ಪಿ.ಶೆಟ್ಟಿ (99.187 ಪರ್ಸಂಟೈಲ್),113ನೇ ರ‍್ಯಾಂಕ್, ಪ್ರಜ್ವಲ್ ಪಟಗಾರ್(97.851 ಪರ್ಸಂಟೈಲ್), 279ನೇ ರ‍್ಯಾಂಕ್‌ನ ಜೊತೆಗೆ ಒಬಿಸಿಯಲ್ಲಿ 53ನೇ ರ‍್ಯಾಂಕ್ ಮತ್ತು ಸೃಜನ್ ಪ್ರಕಾಶ್(89.307ಪರ್ಸಂಟೈಲ್), 1123 ನೇ ರ‍್ಯಾಂಕ್‌ ಜೊತೆಗೆ, ಒಬಿಸಿಯಲ್ಲಿ 302 ನೇ ರ‍್ಯಾಂಕ್ ಪಡೆದಿದ್ದಾರೆ.

ಆರ್ಯ.ಪಿ.ಶೆಟ್ಟಿ
ಪ್ರಜ್ವಲ್ ಪಟಗಾರ್
ಸೃಜನ್ ಪ್ರಕಾಶ್

ರಾಷ್ಟ್ರಾದ್ಯಂತ ಜೂನ್ 18ರಂದು ನ್ಯಾಷನಲ್‌ ಎಂಟ್ರೆನ್ಸ್ ಸ್ಕ್ರೀನಿಂಗ್ ಟೆಸ್ಟ್ (ನೆಸ್ಟ್) ಪರೀಕ್ಷೆಯು ನಡೆದಿದ್ದು, ವಿದ್ಯಾರ್ಥಿಗಳು ದೇಶದ ಉತ್ಕೃಷ್ಟ ದರ್ಜೆಯ ಸಂಸ್ಥೆಯಲ್ಲಿ 5 ವರ್ಷದ ಮೂಲ ವಿಜ್ಞಾನ ವಿಷಯದಲ್ಲಿಅಧ್ಯಯನ ನಡೆಸಲು ಮುಂದಿನ ಸಂದರ್ಶನ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ.

ರ‍್ಯಾಂಕ್ ವಿಜೇತರನ್ನು ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.