ನವದೆಹಲಿ: ಲಾಸ್ ಏಂಜಲೀಸ್ನ ಯುಎ ಸನ್ಸೆಟ್ ಟೂರ್ನಲ್ಲಿ 8:57.19 ಸೆಕೆಂಡ್ ಗಳಲ್ಲಿ ಓಟ ಮುಗಿಸಿ 6 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದು ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದಕ್ಕಾಗಿ ಪಾರುಲ್ ಚೌಧರಿ ಅವರನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಭಿನಂದಿಸಿದ್ದಾರೆ. ಪಾರುಲ್ ಚೌಧರಿ ಅವರು ಮಹಿಳೆಯರ 3000 ಮೀಟರ್ ಓಟದಲ್ಲಿ 9 ನಿಮಿಷಕ್ಕಿಂತ ಕಡಿಮೆ ಸಮಯವನ್ನು ದಾಖಲಿಸಿದ ಮೊದಲ ಭಾರತೀಯ ಅಥ್ಲೀಟ್ ಎಂದು ಟ್ವೀಟ್ನಲ್ಲಿ ಠಾಕೂರ್ ಹೇಳಿದ್ದಾರೆ.
ದೆಹಲಿಯಲ್ಲಿ ಆರು ವರ್ಷಗಳ ಹಿಂದೆ 9:04.5 ಸೆಕೆಂಡ್ ಗಳಸೂರ್ಯ ಲೋಗನಾಥನ್ ಅವರ ದಾಖಲೆಯನ್ನು 27 ವರ್ಷದ ಪಾರುಲ್ ಮುರಿದಿದ್ದಾರೆ. ರೇಸ್ನಲ್ಲಿ ಚೌಧರಿ ಐದನೇ ಸ್ಥಾನದಲ್ಲಿ ಹಿಂದುಳಿದಿದ್ದರು, ಕೊನೆಯ ಎರಡು ಲ್ಯಾಪ್ಗಳಲ್ಲಿ ಪೋಡಿಯಂ ಫಿನಿಶ್ ಪಡೆಯಲು ವೇಗವನ್ನು ಹೆಚ್ಚಿಸಿದ್ದಾರೆ. ಒಲಂಪಿಕ್ ಅಲ್ಲದ ಇಂತಹ 3000 ಮೀಟರ್ ಓಟದಲ್ಲಿ ಸಾಮಾನ್ಯವಾಗಿ ಭಾರತೀಯ ಅಥ್ಲೀಟ್ ಗಳು ಭಾಗವಹಿಸುವುದಿಲ್ಲ.
ಈ ತಿಂಗಳಾಂತ್ಯಕ್ಕೆ ಅಮೇರಿಕಾದ ಒರೆಗಾನ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ತಂಡದ ಭಾಗವಾಗಲಿದ್ದಾರೆ. ಅಲ್ಲಿ ಆಕೆ ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಸ್ಪರ್ಧಿಸಲಿದ್ದಾರೆ. ಈ ಹಿಂದೆ ಚೆನ್ನೈ ನಲ್ಲಿ ನಡೆದ ಸ್ಟೀಪಲ್ ಚೇಸ್ ನಲ್ಲಿ ಆಕೆ ಬಂಗಾದರ ಪದಕ ಗೆದ್ದಿದ್ದಾರೆ.