ಪುರಿಯಲ್ಲಿ ಜಗದೊಡೆಯ ಜಗನ್ನಾಥನ ರಥಯಾತ್ರೆ: ಸಂಜೆ 4 ಗಂಟೆಗೆ ರಥೋತ್ಸವ ಆರಂಭ

ಪುರಿ: ಜಗದೊಡೆಯನಾದ ಜಗನ್ನಾಥನ ರಥಯಾತ್ರೆಯ ಪಹಂಡಿ ಆಚರಣೆಗಳು ಒಡಿಶಾದ ಪುರಿಯಲ್ಲಿ ಪ್ರಾರಂಭವಾಗಿದೆ. ಎರಡು ವರ್ಷಗಳ ಕೋವಿಡ್ -19 ಮಹಾಮಾರಿಯ ನಂತರ ಈ ವರ್ಷ ಜಗನ್ನಾಥ ರಥ ಯಾತ್ರೆಯಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಉತ್ಸವದಲ್ಲಿ ನಿರೀಕ್ಷಿತ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಒಡಿಶಾ ಪೊಲೀಸರು ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಎಲ್ಲಾ ಧಾರ್ಮಿಕ ಕ್ರಿಯೆಗಳು ಮುಗಿದ ಬಳಿಕ ಭಗವಾನ್ ಜಗನ್ನಾಥ, ದೇವಿ ಸುಭದ್ರ ಮತ್ತು ಭಗವಾನ್ ಬಲಭದ್ರನ ಮೂರು ರಥಗಳನ್ನು ಭಕ್ತರು ಎಳೆಯುತ್ತಾರೆ ಮತ್ತು ಶ್ರೀಮಂದಿರದ ಸಿಂಹ ದ್ವಾರದ ಮುಂದೆ ತಂದು ನಿಲ್ಲಿಸುತ್ತಾರೆ. ವಾರ್ಷಿಕ ರಥೋತ್ಸವಕ್ಕೆ ಮುನ್ನ ಪ್ರತಿ ವರ್ಷ ಮೂರು ರಥಗಳನ್ನು ಹೊಸದಾಗಿ ನಿರ್ಮಿಸಲಾಗುತ್ತದೆ. ಎಲ್ಲಾ 3 ರಥಗಳನ್ನು ಎರಡು ತಿಂಗಳೊಳಗೆ ನಿರ್ಮಿಸಲಾಗಿದೆ ಮತ್ತು ನಿರ್ಮಾಣ ಕಾರ್ಯ ನಿನ್ನೆ ಪೂರ್ಣಗೊಂಡಿದೆ.

 

ಮೆರವಣಿಗೆ ಕಾರ್ಯಕ್ರಮಗಳು ಈಗಾಗಲೇ ಮುಗಿದಿದ್ದು, 2.30 ರಿಂದ 3.30 ರ ನಡುವೆ ಛೇರಾ ಪಹ್ನ್ರಾ ಕಾರ್ಯಕ್ರಮ ನಡೆಯುತ್ತದೆ. ಪುರಿ ಗಜಪತಿಯ ಪಟ್ಟದ ರಾಜ ಮಹಾರಾಜ ದಿಬ್ಯಸಿಂಗ ದೇಬ್ ಅವರು ಮಧ್ಯಾಹ್ನ 2.30 ರಿಂದ 3.30 ರ ನಡುವೆ ಮೂರು ರಥಗಳನ್ನು ಗುಡಿಸಲಿದ್ದಾರೆ. ಸಂಜೆ 4 ಗಂಟೆಯಿಂದ ರಥೋತ್ಸವ ಆರಂಭವಾಗಲಿದೆ.

Image