ಉಡುಪಿ: ನೂಪುರ್ ಶರ್ಮಾ ಹೇಳಿಕೆ ಪರವಾಗಿ ಪೋಸ್ಟ್ ಮಾಡಿದನ್ನೆ ನೆಪವಾಗಿಟ್ಟುಕೊಂಡು ರಾಜಸ್ಥಾನದ ಉದಯಪುರದ ಹಿಂದೂ ಟೈಲರ್ ಕನ್ಹಯ್ಯ ಲಾಲ್ ನನ್ನು ಮತಾಂಧ ಶಕ್ತಿಗಳು ತಾಲಿಬಾನ್ ಮಾದರಿಯಲ್ಲಿ ಹತ್ಯೆ ಮಾಡಿರುವ ಘಟನೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಉಗ್ರವಾಗಿ ಖಂಡಿಸಿದ್ದಾರೆ.
ರಾಜಸ್ಥಾನದ ಈ ಘಟನೆ ಹೇಯ ಕೃತ್ಯವಾಗಿದ್ದು, ಮಾನವೀಯ ಸಮಾಜ ಕ್ಷಮಿಸಲಾರದ ಘಟನೆಯಾಗಿದೆ. ತಾಲಿಬಾನ್ ಮಾದರಿಯಲ್ಲಿ ಹತ್ಯೆಯ ಚಿತ್ರಣ ಮಾಡಿ ದೇಶದಲ್ಲಿ ಭಯದ ವಾತಾವರಣ ಮೂಡಿಸಲು ಕೆಲ ಶಕ್ತಿಗಳು ಪ್ರಯತ್ನ ಮಾಡುತ್ತಿದೆ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ನೀತಿಯೇ ಈ ಘಟನೆಗೆ ಕಾರಣವಾಗಿದೆ. ದೇಶದಲ್ಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಹುಸಂಖ್ಯಾತರ ಭಾವನೆಗಳ ವಿರುದ್ಧವಾಗಿ ಹೇಳಿಕೆ ನೀಡುವ ಸೆಕ್ಯುಲರ್ ಪಕ್ಷಗಳು ಮತ್ತು ವಿಚಾರವಂತ ಬುದ್ದಿ ಜೀವಿಗಳು ಈ ಘಟನೆ ಬಗ್ಗೆ ನಿಲುವೇನು? ಇಂತಹ ಮತಾಂಧ ಶಕ್ತಿಗಳನ್ನು ಎಳವೆಯಲ್ಲಿ ಮಟ್ಟ ಹಾಕುವ ಅಗತ್ಯವಿದೆ. ಈ ಜಿಹಾದಿ ಶಕ್ತಿಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಆರೋಪಿಗಳಿಗೆ ಮರಣ ದಂಡನೆಯೇ ಸೂಕ್ತವೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.