ಬ್ರಹ್ಮಾವರ: ಕೋಟ ಹಂದೆ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದ ರಥೋತ್ಸವ ಮೇ. 7ರಂದು ನಡೆಯಲಿದೆ. ಕೋಟ ಹೈಸ್ಕೂಲ್ ಹತ್ತಿರದಲ್ಲಿ ಹಂದಟ್ಟು ಗ್ರಾಮದಲ್ಲಿರುವ ಹಂದೆ
‘ರಥೋತ್ಸವದ ಪ್ರಯುಕ್ತ ಈಗಾಗಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಮೇ. 6ರಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೋಟದ ಜ್ಞಾನದೀಪ ನೃತ್ಯ ಕಲಾಕೇಂದ್ರ ಇವರಿಂದ ನೃತ್ಯ ವೈಭವ, 8ಕ್ಕೆ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ವಾರಂಬಳ್ಳಿ ವೆಂಕಪ್ಪಯ್ಯ ವಿರಚಿತ ‘ಸೌಗಂಧಿಕ ಪುಷ್ಪಾಪಹರಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. 7ರ ಸಂಜೆ 5ಕ್ಕೆ ಇನಿದನಿ ಬಳಗ ಕೋಟ ಇವರಿಂದ ಸಂಗೀತ ಸುಧೆ, ಸಂಜೆ 6ರಿಂದ ಚಿತ್ರಪಾಡಿಯ ಈಶ ಲಾಸ್ಯ ನೃತ್ಯ ಬಳಗದವರಿಂದ ನೃತ್ಯ ಸಿಂಚನ, ರಾತ್ರಿ 7.30ರಿಂದ ಸ್ಥಳೀಯ ಪ್ರತಿಭೆಗಳಿಂದ ಕಾರ್ಯಕ್ರಮ, ಕಲಾವಿದ ರಜತ್ ಮಯ್ಯ ಅವರಿಂದ ಸಂಗೀತ ರಸಮಂಜರಿ, ರಾತ್ರಿ ಗಂಟೆ 10ರಿಂದ ಕುಂದಾಪುರ ಕಲಾ ಸ್ಫೂರ್ತಿ ಹವ್ಯಾಸಿ ನಾಟಕ ತಂಡದವರಿಂದ ಹಾಸ್ಯಮಯ ನಗೆ ನಾಟಕ ‘ಮನಿ ಒಕ್ಲ್’ ಪ್ರದರ್ಶನಗೊಳ್ಳಲಿದೆ’ ಎಂದು ವ್ಯವಸ್ಥಾಪನಾ ಉತ್ಸವ ಸಮಿತಿಯ ಅಧ್ಯಕ್ಷ ಅಮರ ಹಂದೆ ತಿಳಿಸಿದ್ದಾರೆ.