ಕೇರಳ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಯನಾಡ್ನಲ್ಲಿರುವ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಕೆಲವು ಕಿಡಿಗೇಡಿಗಳು ಕಚೇರಿಯೊಳಗೆ ನುಗ್ಗಿ ಕಚೇರಿಯನ್ನು ಧ್ವಂಸಗೊಳಿಸುತ್ತಿರುವ ವೀಡಿಯೋ ಒಂದನ್ನು ಮಾಧ್ಯಮ ಸಂಸ್ಥೆ ಎ ಎನ್ ಐ ಹಂಚಿಕೊಂಡಿದೆ.
ರಾಹುಲ್ ಗಾಂಧಿ ಅವರ ವಯನಾಡ್ ಕಚೇರಿಯ ಗೋಡೆಯನ್ನು ಹತ್ತಿ ಅದನ್ನು ಧ್ವಂಸಗೊಳಿಸುತ್ತಿದ್ದಾಗ, ಗೂಂಡಾಗಳು ಎಸ್ಎಫ್ಐ ಧ್ವಜಗಳನ್ನು ಹಿಡಿದಿದ್ದರು ಎಂದು ಭಾರತೀಯ ಯುವ ಕಾಂಗ್ರೆಸ್ ಟ್ವೀಟ್ನಲ್ಲಿ ಆರೋಪಿಸಿದೆ.
“ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಎಸ್ಎಫ್ಐ ಕಾರ್ಯಕರ್ತರು ಮತ್ತು ಮುಖಂಡರ ಗುಂಪು ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಗೆ ಬಲವಂತವಾಗಿ ನುಗ್ಗಿತು. ಕಚೇರಿಯಲ್ಲಿದ್ದವರ ಮೇಲೆ, ರಾಹುಲ್ ಗಾಂಧಿ ಅವರ ಸಿಬ್ಬಂದಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಕಾರಣ ಗೊತ್ತಿಲ್ಲ” ಎಂದು ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
#WATCH | Kerala: Congress MP Rahul Gandhi's office in Wayanad vandalised.
Indian Youth Congress, in a tweet, alleges that "the goons held the flags of SFI" as they climbed the wall of Rahul Gandhi's Wayanad office and vandalised it. pic.twitter.com/GoCBdeHAwy
— ANI (@ANI) June 24, 2022
Source: ANI