ಚೆನ್ನೈ ಅಂದ ತಕ್ಷಣ ಮನಸ್ಸಿಗೆ ಬರುವುದು ಕಂಚೀಪುರಂನ ರೇಷ್ಮೆ ಸೀರೆಗಳು. ಮಾರುಕಟ್ಟೆಯಲ್ಲಿ ರೇಷ್ಮೆ ಸೀರೆಗಳನ್ನು ಮಾರುವ ಅಂಗಡಿಗಳು ನೂರಾರಿವೆ. ಆದರೆ, ಅಪ್ಪಟ ರೇಷ್ಮೆ ಹೆಸರಿನಲ್ಲಿ ಜರಿ ಸೀರೆಯನ್ನು ಗ್ರಾಹಕರಿಗೆ ಮಾರಿ, ದುಡ್ಡು ಮಾಡುವ ಹಲವಾರು ಸಂಸ್ಥೆಗಳಿವೆ. ಇದಕ್ಕೆ ಅಪವಾದವೆಂಬಂತೆ ಅಪ್ಪಟ ರೇಷ್ಮೆ ಸೀರೆ ಮತ್ತು ಶುದ್ದ ಬೆಳ್ಳಿಯ ಆಭರಣಗಳನ್ನು ಗ್ರಾಹಕರ ಮನೆ ಮನೆಗೆ ತಲುಪಿಸುತ್ತಿದೆ ಚೆನ್ನೈ ಶ್ರೀ ಕುಮರನ್ ಸ್ಟೋರ್ಸ್ ರೇಷ್ಮೆ ಸೀರೆ ಮತ್ತು ಬೆಳ್ಳಿ ಆಭರಣ ಮಳಿಗೆ.
ಚೆನ್ನೈ ಕುಮರನ್ ಸಿಲ್ಕ್ಸ್:
ಕಂಚೀಪುರಂ ಸಿಲ್ಕ್, ಬನಾರಸ್ ಸಿಲ್ಕ್, ಕಾಟನ್, ಲಿನನ್, ಕ್ರೇಪ್, ಟಿಶ್ಯೂ ಹೀಗೆ ವೈವಿಧ್ಯಮಯ ಸೀರೆಗಳು ಮತ್ತು ಅದಕ್ಕೊಪ್ಪುವಂತೆ ಅಲಂಕರಿಸಲು ಬೇಕಾದ ‘ವರಂ’ ಬೆಳ್ಳಿಯ ಆಭರಣಗಳಾದ ಜುಮ್ಕಿ, ಬಳೆಗಳು, ನೆಕ್ಲೇಸು, ಕಿವಿಯೋಲೆಗಳು, ಮದುವೆ ಮತ್ತಿತರ ಸಂಭ್ರಮಗಳಿಗಾಗಿ ಲೆಹಂಗಾ, ಕುರ್ತಿ ಮತ್ತು ಪುರುಷರ ವಸ್ತ್ರಗಳು ಎಲ್ಲಾ ಹುಡುಕಾಟಗಳಿಗೂ ಒಂದೇ ಕಡೆ ಪರಿಹಾರ ದೊರಕಿಸಿಕೊಡುವ ಚೆನ್ನೈ ಕುಮರನ್ ಸ್ಟೋರ್ಸ್ ನ ಮಳಿಗೆ ಬೆಂಗಳೂರಿನ ಜಯನಗರದ 1 ನೇ ಸಿ ಮುಖ್ಯರಸ್ತೆ, 5 ನೇ ಬ್ಲಾಕ್ ನಲ್ಲಿದೆ.
1955 ರಲ್ಲಿ ಪರಂಪರಾಗತವಾಗಿ ಪ್ರಾರಂಭವಾದ ಶ್ರೀ ಕುಮರನ್ ಸ್ಟೋರ್ಸ್ ಕಳೆದ 67 ವರ್ಷಗಳಿಂದ, ಅಂದರೆ ಸರಿ ಸುಮಾರು ಆರು ದಶಕಗಳಿಂದಲೂ ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ ಸೀರೆಗಳನ್ನು ಒದಗಿಸುತ್ತಾ ಬಂದಿದೆ. ಬದಲಾದ ಸಂದರ್ಭಕ್ಕೆ ತಕ್ಕಂತೆ ಗ್ರಾಹಕರ ಅಗತ್ಯತೆಗಳನ್ನು ಮತ್ತು ಅವರ ಆರ್ಥಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ವಿವಿಧ ಶ್ರೇಣಿಯಲ್ಲಿ ವೈವಿಧ್ಯಮಯ ಸೀರೆಗಳನ್ನು ಒದಗಿಸುತ್ತಾ ಬಂದಿದ್ದೇವೆ.
ನವೆಂಬರ್ 2021 ರಲ್ಲಿ ನಾವು ಬೆಂಗಳೂರಿನ ಜಯನಗರಕ್ಕೆ ಸ್ಥಳಾಂತರಗೊಂಡು ಗ್ರಾಹಕರ ಅನುಕೂಲಕ್ಕಾಗಿ ಹೊಸ ಅಂಗಡಿಯನ್ನು ತೆರೆದಿದ್ದೇವೆ.
ವರಂ ಬೆಳ್ಳಿಯ ಆಭರಣಗಳು:
ಮಹಿಳೆಯರಿಗಾಗಿ ವಿಶೇಷ ಆಸ್ಥೆಯಿಂದ ತಯಾರಿಸಲ್ಪಟ್ಟಿರುವ ಬೆಳ್ಳಿಯ ಆಭರಣಗಳ ಸಂಗ್ರಹವೇ ನಮ್ಮಲ್ಲಿದೆ. ಇದು ಕುಮರನ್ ಸಿಲ್ಕ್ ಟ್ರೇಡರ್ಸ್‌ನ ಒಂದು ಭಾಗವಾಗಿದೆ. ಕಡಿಮೆ ಬೆಲೆಗೆ ಅತ್ಯಾಕರ್ಶಕವಾದ ಶುದ್ದ ಬೆಳ್ಳಿಯಿಂದ ತಯಾರಿಸಲ್ಪಟ್ಟ ಆಭರಣಗಳ ಶ್ರೇಣಿ ನಮ್ಮಲ್ಲಿದೆ.
ಶ್ರೀ ಕುಮರನ್ ಸ್ಟೋರ್ಸ್ ಹಬ್ಬ ಹರಿದಿನ ಸಂಭ್ರಮದ ನಿಮ್ಮ ಎಲ್ಲಾ ಅವಶ್ಯಕತೆಗಳಿಗೆ ಏಕೈಕ ನಿಲುಗಡೆ ತಾಣವಾಗಿದೆ. ಬನ್ನಿ ಶ್ರೀ ಕುಮಾರನ್ ಸ್ಟೋರ್ಸ್ ಗೆ ಭೇಟಿ ನೀಡಿ, ನಿಮ್ಮ ಸಂಭ್ರಮದಲ್ಲಿ ನಾವೂ ಭಾಗಿಯಾಗುವ ಅವಕಾಶ ಕೊಡಿ….