ಉಡುಪಿ: ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ, ಪ್ರಸಾದ್ ನೇತ್ರಾಲಯ, ಕನ್ನರ್ಪಾಡಿ ಬಿಲ್ಲವ ಸೇವಾ ಸಂಘ, ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕಡೆಕಾರು, ಕಡೆಕಾರು ಗ್ರಾಮ ಪಂಚಾಯತ್, ಕೆ.ಎಂ.ಸಿ ಸಮುದಾಯ ವೈದ್ಯಕೀಯ ವಿಭಾಗ, ನಿರೂಪಮ ಪ್ರಸಾದ್ ಶೆಟ್ಟಿ ಸಾಫಲ್ಯ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ( ಅಂಧತ್ವ ವಿಭಾಗ), ಡಾ.ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಮತ್ತು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಕಡೆಕಾರಿನ ಬಿಲ್ಲವ ಸೇವಾ ಸಂಘದಲ್ಲಿ ಜೂನ್ 25 ರಂದು ಶನಿವಾರ ಬೆಳಗ್ಗೆ 9.00 ಗಂಟೆಯಿಂದ ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಲಾಗಿದೆ.
ತಪಾಸಣೆ ಮಾಡಿಸಿಕೊಳ್ಳಲು ಇಚ್ಛಿಸುವವರು ಬೆಳಗ್ಗೆ 8.30 ರಿಂದ 11.30 ರವರೆಗೆ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬಹುದು. ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತು ಪಡಿಸಿದ ದಿನಾಂಕದಂದು ಉಡುಪಿ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಯ ವಾಹನದಲ್ಲಿ ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮರುದಿನ ವಾಪಸ್ ಕರೆತಂದು ಬಿಡಲಾಗುವುದು. ಕನ್ನಡಕದ ಅಗತ್ಯವಿರುವವರಿಗೆ ಉಚಿತವಾಗಿ ಕನ್ನಡಕ ನೀಡಲಾಗುವುದು. ಶಿಬಿರದಲ್ಲಿ ಇತರ ಸೌಲಭ್ಯಗಳು ಉಚಿತವಾಗಿ ದೊರೆಯಲಿವೆ.
ಬಿ.ಪಿ, ಇಸಿಜಿ, , ರಕ್ತ ಪರೀಕ್ಷೆ, ಕೊಲೆಸ್ಟರಾಲ್ ತಪಾಸಣೆ ಬೆಳಗ್ಗೆ 8.00 ರಿಂದ 9.00 ರ ತನಕ ಹಾಗೂ ಆರ್ ಬಿ ಎಸ್(30 ವರ್ಷ ಮೇಲ್ಪಟ್ಟವರಲ್ಲಿ) ತಪಾಸಣೆ ನಡೆಸಲಾಗುವುದು. ಕೊಲೆಸ್ಟರಾಲ್ ತಪಾಸಣೆ ನಡೆಸ ಬಯಸುವವರು ಹೊಟ್ಟೆ ಖಾಲಿ ಇಡತಕ್ಕತ್ತು.
ಹೆಚ್ಚಿನ ಮಾಹಿತಿಗಾಗಿ ಕೆ ಕೃಷ್ಣಮೂರ್ತಿ ಆಚಾರ್ಯ: 9845199597, ಚರಣ್ ರಾಜ್ ಬಂಗೇರ: 9886591952, ನವೀನ್ ಶೆಟ್ಟಿ: 9945413992, ತಾರನಾಥ್ ಸುವರ್ಣ: 9880510603 ಇವರನ್ನು ಸಂಪರ್ಕಿಸಬಹುದು.