ಉಡುಪಿ: ಜೂನ್ 20 ರಂದು ರಾತ್ರಿ ಸುರಿದ ಭಾರೀ ಮಳೆಗೆ ಮರವೊಂದು ಲಕ್ಷ್ಮೀ ನಗರದ 3 ನೇ ಅಡ್ಡ ರಸ್ತೆಯ ವೃದ್ಧೆಯಾದ ಗುಲಾಬಿ ಎಂಬವರ ಮನೆಯ ಮೇಲೆ ಮರ ಬಿದ್ದು ಬಹಳಷ್ಟು ನಷ್ಟವಾಗಿದ್ದು, ನಗರ ಸಭಾ ಸದಸ್ಯ ವಿಜಯ್ ಕೊಡವೂರು ಮುಂದಾಳತ್ವದಲ್ಲಿ ಮತ್ತು ಸ್ಥಳೀಯ ಸಂಘ ಸಂಸ್ಥೆ ಹಾಗೂ ಕಾರ್ಯಕರ್ತರ ಸಹಾಯದಿಂದ ತುರ್ತಾಗಿ ಮರವನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.
ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ಸಿಮೆಂಟ್ ಶೀಟ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಲಕ್ಷ್ಮೀ ನಗರದ ಗೆಳೆಯರ ಬಳಗ ಕಾರ್ಯಕರ್ತರು ಮತ್ತು ಸ್ಥಳೀಯ ಕಾರ್ಯಕರ್ತರು ಸೇರಿ ಸಿಮೆಂಟ್ ಶೀಟ್ ಹಾಕುವ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜೇಂದ್ರ ಗರ್ಡೆ, ಮಂಜುನಾಥ ಗರ್ಡೆ, ಅಮಿತ್ , ಅರುಣ್, ವಿನಯ್ ಗರ್ಡೆ, ಚಂದ್ರಕಾಂತ್ ಕೊಡವೂರು, ಸಂದೇಶ್ ಕೊಡವೂರು, ಸತೀಶ್ ಆಚಾರ್ಯ, ಕೃಷ್ಣ ಪೂಜಾರಿ ಮತ್ತು ಹಿರಿಯರಾದ ಗೋಪಾಲ್, ಜಯಕರ್, ಇನ್ನಿತರರು ಉಪಸ್ಥಿತರಿದ್ದರು.