ಉಡುಪಿ: ಉಡುಪಿ ತಾಲೂಕು ಕೊಳಲಗಿರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ.)
ದಲ್ಲಿ ಟೊಯೋಟಾ ಕಾರು ಉತ್ಪಾದನಾ ಸಂಸ್ಥೆಯಿಂದ ಪ್ರಾಯೋಜಿತ ಟೆಕ್ನೀಷಿಯನ್ ಕೋರ್ಸ್ಗಳಾದ ವೆಹಿಕಲ್ ಅಸ್ಸೆಂಬ್ಲಿ ಫಿಟ್ಟರ್ ಮತ್ತು ಆಟೋಮೊಬೈಲ್ ವೆಲ್ಡರ್ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ ಉತ್ತೀರ್ಣರಾದ, ಕನಿಷ್ಠ 17 ವರ್ಷ ವಯೋಮಿತಿಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ಜಿ.ಟಿ.ಟಿ.ಸಿ. ಯಲ್ಲಿ ತರಬೇತಿ ಹಾಗೂ ಬೆಂಗಳೂರಿನ ಟೊಯೊಟಾ ಕಿರ್ಲೋಸ್ಕರ್ ಕಾರು ಉತ್ಪಾದನಾ ಕಂಪೆನಿಯಲ್ಲಿ 2 ವರ್ಷಗಳ ಕೈಗಾರಿಕಾ ತರಬೇತಿ ನೀಡಲಾಗುವುದು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೊಳಲಗಿರಿ, ಉಪ್ಪೂರು, ಉಡುಪಿ ದೂರವಾಣಿ ಸಂಖ್ಯೆ : 0820-2950101, ಮೊ.ನಂ. 9880510585 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.