ಮಣಿಪಾಲ: ಮಣಿಪಾಲ್ ಅಕಾಡೆಮಿಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ನಲ್ಲಿ ಮೂರು ರೀತಿಯ ವಿಭಾಗಗಳಿಗೆ ಪ್ರವೇಶವನ್ನು ಘೋಷಿಸಲಾಗಿದೆ.
ಪರಿಸರ ವಿಜ್ಞಾನದ ಸೌಂದರ್ಯಶಾಸ್ತ್ರದಲ್ಲಿ ಎಂಎ, ಕಲೆ ಮತ್ತು ಶಾಂತಿ ಅಧ್ಯಯನದಲ್ಲಿ ಎಂಎ ಮತ್ತು ಸೌಂದರ್ಯಶಾಸ್ತ್ರ ಮತ್ತು ಶಾಂತಿ ಅಧ್ಯಯನದಲ್ಲಿ ಬಿಎ. ತರಗತಿಗಳಿಗೆ ಪ್ರವೇಶಾತಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರೊ ವರದೇಶ್ ಹಿರೇಗಂಗೆ, ನಿರ್ದೇಶಕರು, ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ದೂರವಾಣಿ – 0820-2922915, ಆಫೀಸು: 0820-2922921 ಇಲ್ಲಿ ಸಂಪರ್ಕಿಸಬಹುದಾಗಿದೆ.
ಇಮೇಲ್ ವಿಳಾಸ: [email protected], ಆಫೀಸ್ ಇಮೇಲ್: [email protected]
ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಎನ್ನುವುದು ಸಮಕಾಲೀನ ಬಿಕ್ಕಟ್ಟುಗಳನ್ನು ಎದುರಿಸಲು ಪರ್ಯಾಯ ಜ್ಞಾನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಅಂತರಶಿಸ್ತೀಯ ಬೋಧನೆ ಮತ್ತು ಸಂಶೋಧನೆಯೊಂದಿಗೆ ತೊಡಗಿರುವ ವಿಭಾಗವಾಗಿದೆ.












