ಉಡುಪಿ: ಸಾಣೂರು ಜಂಕ್ಷನ್ನಿಂದ ಬಿರ್ಕನಕಟ್ಟೆ ರಸ್ತೆ ಅಭಿವೃದ್ಧಿ ರಾ.ಹೆ-169 ಅಡಿಯಲ್ಲಿ ಬರುವ
ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಮೂಡಬಿದ್ರೆ ವಲಯ ವ್ಯಾಪ್ತಿಗೆ ಒಳಪಡುವ ಸಾಣೂರು ಗ್ರಾಮದ ಸರಕಾರಿ ಸ್ಥಳದಲ್ಲಿರುವ 537 ಮರಗಳನ್ನು ಹಾಗೂ ಕಾರ್ಕಳ ವ್ಯಾಪ್ತಿಗೆ ಒಳಪಡುವ ಪುಲ್ಕೇರಿ ಜಂಕ್ಷನ್ನಿಂದ ಸಾಣೂರುವರೆಗೆ ಸರಕಾರಿ ಸ್ಥಳದಲ್ಲಿರುವ 341 ಮರಗಳನ್ನು ಗುರುತಿಸಲಾಗಿದ್ದು, ಸದ್ರಿ ಮರಗಳಲ್ಲಿ ಕಾಮಗಾರಿಗೆ ಅಡಚಣೆಯಾದ ಮರಗಳನ್ನು ತೆರವುಗೊಳಿಸುವ ಕುರಿತು ಜೂನ್ 30 ರಂದು ಮಧ್ಯಾಹ್ನ 3 ಗಂಟೆಗೆ ಮೂಡಬಿದ್ರೆ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಏರ್ಪಡಿಸಲಾಗಿದೆ.
ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ, ಸಾರ್ವಜನಿಕರು ಸಭೆಯಲ್ಲಿ ಹಾಜರಾಗಿ ಅಥವಾ ವೃಕ್ಷ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ, ಕುಂದಾಪುರ ಇವರಿಗೆ ಲಿಖಿತ ರೂಪದಲ್ಲಿ ಅಥವಾ ಇ-ಮೇಲ್
[email protected] ಮೂಲಕ ಸಲ್ಲಿಸಬಹುದಾಗಿದೆ ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ
ಪ್ರಕಟಣೆ ತಿಳಿಸಿದೆ.