ಉಡುಪಿ: ಒಂಬತ್ತನೇ , ಹತ್ತನೇ , ಪಿಯುಸಿ, ಸಿಯಿಟಿ, ಜೆಇಇ, ನೀಟ್, ಬ್ಯಾಂಕಿಂಗ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ಆಯೋಜಿಸಿ ಉತ್ಕೃಷ್ಟ ಫಲಿತಾಂಶ ಗಳಿಸುತ್ತಿರುವ ಆಚಾರ್ಯಾಸ್ ಏಸ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆಯನ್ನು ನೀಡಲಾಯಿತು.
ಸೆಂಟ್ರಲ್ ಬ್ಯಾಂಕಿನ ನಿವೃತ್ತ ಪ್ರಬಂಧಕ ಸೊಂಡೂರು ಪ್ರಹ್ಲಾದ ಆಚಾರ್ಯ, ಏಸ್ ಸಂಸ್ಥೆಯ ಹತ್ತನೇ ತರಗತಿಯ ಸಿ.ಬಿ.ಎಸ್. ಇ, ಸ್ಟೇಟ್, ಐ.ಸಿ.ಎಸ್.ಇ ನ 60 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಡುಗೊರೆಯನ್ನು ನೀಡಿ ಶುಭ ಹಾರೈಸಿದರು.
ಸಂಸ್ಥೆಯ ಆಡಳಿತ ನಿರ್ದೇಶಕರಾದ ಅಕ್ಷೋಭ್ಯ ಆಚಾರ್ಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ,
ಈ ಬಾರಿ ಹತ್ತನೆಯ ತರಗತಿಯಲ್ಲಿ ಗರಿಷ್ಠ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ನಗದು ಹಾಗೂ ಪಾರಿತೋಷಕವನ್ನು ಉಡುಗೊರೆಯಾಗಿ ನೀಡಲಿರುವ ಬಗ್ಗೆ ತಿಳಿಸಿದರು.
ಪಿ.ಲಾತವ್ಯ ಆಚಾರ್ಯ, ಪ್ರೀತಿ.ಎಲ್.ಆಚಾರ್ಯ ಉಪಸ್ಥಿತರಿದ್ದರು.
ಒಂಬತ್ತನೇ, ಹತ್ತನೇ, ಪಿಯುಸಿಯ ದೈನಂದಿನ ತರಗತಿಗಳು ಹಾಗೂ ಸಿಯಿಟಿ, ಜೆಇಇ, ನೀಟ್ ನ ವಾರಾಂತ್ಯದ ತರಗತಿಗಳು ಆರಂಭವಾಗಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಉಡುಪಿ ತೆಂಕಪೇಟೆ ಶ್ರೀಲಕ್ಷ್ಮೀವೆಂಕಟರಮಣ ದೇವಾಲಯದ ಮುಂಭಾಗದ ರಾಧೇಶ್ಯಾಮ ಕಟ್ಟಡದ ಏಸ್ ಕಚೇರಿ ಅಥವಾ ಬ್ರಹ್ಮಾವರ ಮಧುವನ ಕಾಂಪ್ಲೆಕ್ಸ್ ನಲ್ಲಿರುವ ಏಸ್ ಕಚೇರಿಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ತಿಳಿಸಿದ್ದಾರೆ.