ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಯುದ್ದ ಹಿನ್ನೆಲೆಯಲ್ಲಿ ಯೂರೋಪ್ ಮತ್ತಿತರ ಪಾಶ್ಚಾತ್ಯ ದೇಶಗಳು ಮಾಸ್ಕೋದೊಂದಿಗಿನ ವ್ಯವಹಾರವನ್ನು ತಿರಸ್ಕರಿಸಿರುವುದರಿಂದ, ಭಾರತವು ಈ ಸನ್ನಿವೇಶವನ್ನು ತನ್ನ ಅನುಕೂಲಕ್ಕೆ ಪರಿವರ್ತಿಸಲು ಉತ್ಸುಕವಾಗಿದೆ ಎನ್ನಲಾಗಿದೆ. ಭಾರತವು ತನ್ನ ರಷ್ಯಾದ ತೈಲ ಆಮದುಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳೊಂದಿಗೆ ದ್ವಿಗುಣಗೊಳಿಸಲು ನೋಡುತ್ತಿದ್ದು, ರಷ್ಯಾದ ರೋಸ್ನೆಫ್ಟ್ ಪಿ ಜೆ ಎಸ್ ಸಿ ಯಿಂದ ಹೆಚ್ಚು-ರಿಯಾಯಿತಿ ಸರಬರಾಜುಗಳನ್ನು ತೆಗೆದುಕೊಳ್ಳಲು ಉತ್ಸುಕವಾಗಿದೆ ಎಂದು ವರದಿಯಾಗಿದೆ.
ಭಾರತದ ಸಂಸ್ಕಾರಕಗಳು ಒಟ್ಟಾಗಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲಕ್ಕಾಗಿ ಆರು ತಿಂಗಳ ಹೊಸ ಪೂರೈಕೆ ಒಪ್ಪಂದಗಳನ್ನು ಅಂತಿಮಗೊಳಿಸುವ ಮತ್ತು ಭದ್ರಪಡಿಸುವ ಕೆಲಸವನ್ನು ಮಾಡುತ್ತಿವೆ ಎಂದು ಕಂಪನಿಗಳ ಸಂಗ್ರಹಣೆ ಯೋಜನೆಗಳ ಬಗ್ಗೆ ತಿಳಿದಿರುವ ಬಲ್ಲವರು ತಿಳಿಸಿದ್ದಾರೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ಈ ಪೂರೈಕೆ ಒಪ್ಪಂದಗಳು ಅಂತಿಮವಾದಲ್ಲಿ, ಭಾರತವು ಈಗಾಗಲೇ ಇತರ ಒಪ್ಪಂದಗಳ ಮೂಲಕ ರಷ್ಯಾದಿಂದ ಖರೀದಿಸುವ ಸಾಗಣೆಗಳಿಂದ ಇದು ಪ್ರತ್ಯೇಕವಾದ ಸಾಗಣೆಯಾಗಲಿದೆ. ಎಲ್ಲಾ ಸರಕುಗಳಿಗೆ ಸಂಪೂರ್ಣ ಹಣಕಾಸು ಒದಗಿಸಲಿರುವ ಭಾರತೀಯ ಬ್ಯಾಂಕುಗಳೊಂದಿಗೆ ಕಾರ್ಗೋ ಮತ್ತು ಬೆಲೆಗಳ ವಿವರಗಳ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಮೂಲಗಳು ತಿಳಿಸಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಇವು ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳಾಗಿವೆ. ಯುರೋಪಿಯನ್ ಖರೀದಿದಾರರು ರಷ್ಯಾ ತೈಲಗಳಿಗೆ ಪರ್ಯಾಯಗಳಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ನೆಚ್ಚಿಕೊಂಡದ್ದರಿಂದ ರಷ್ಯಾದ ಕಚ್ಚಾ ತೈಲ ಅಭೂತಪೂರ್ವ ಪ್ರಮಾಣದಲ್ಲಿ ಭಾರತ ಮತ್ತು ಚೀನಾವನ್ನು ತಲುಪುತ್ತಿದೆ.