ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಉಡುಪಿ ಟೆಂಪಲ್ ಸಿಟಿ ಲೀಜನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 04 ಶನಿವಾರದಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಯಾಣಪುರದ “ಸ್ಪಂದನ ” ವಿಕಲ ಚೇತನರ ಅನಾಥಾಶ್ರಮಕ್ಕೆ ತೆಂಗಿನ ಸಸಿಗಳ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಟೆಂಪಲ್ ಸಿಟಿ ಲೀಜನ್ ನ ಅಧ್ಯಕ್ಷ ಜಗದೀಶ ಕೆಮ್ಮಣ್ಣು, ರಾಷ್ಟ್ರೀಯ ಅಧಿಕಾರಿ ಚಿತ್ರ ಕುಮಾರ್, ವಿಜಯ್ ಕುಮಾರ್ ಉದ್ಯಾವರ, ಕಾರ್ಯದರ್ಶಿ ಸಂತೋಷ್ ಕುಮಾರ್, ಖಜಾಂಚಿ ರಾಜೇಶ್ ಆಚಾರ್ಯ, ಸರ್ವ ಸದಸ್ಯರು ಹಾಗೂ ಅನಾಥಾಶ್ರಮದ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.












