ನವದೆಹಲಿ: ಮಾಜಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ತಾನು ಜೂನ್ 2 ರಂದು ಬಿಜೆಪಿ ಸೇರುವುದಾಗಿ ಮಂಗಳವಾರ ಖಚಿತಪಡಿಸಿದ್ದಾರೆ.
ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಸಮ್ಮುಖದಲ್ಲಿ ಹಾರ್ದಿಕ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಬಿಜೆಪಿ ನಾಯಕರೊಬ್ಬರು ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಗುಜರಾತಿನಲ್ಲಿ ಪಾಟಿದಾರ್ ಕೋಟಾ ಆಂದೋಲನವನ್ನು ಮುನ್ನಡೆಸುವ ಮೂಲಕ ಪ್ರಾಮುಖ್ಯತೆ ಪಡೆದಿದ್ದ ಮಾಜಿ ಕಾಂಗ್ರೆಸಿಗ ಪಟೇಲ್ ಇತ್ತೀಚೆಗಷ್ಟೆ ಕೈ ಗೆ ಗುಡ್ ಬೈ ಹೇಳಿದ್ದರು.
2019 ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದ 28 ವರ್ಷದ ಪಟೇಲ್, ಪಕ್ಷ ತೊರೆಯುವ ಮುನ್ನ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಕಟುವಾದ ಪತ್ರವೊಂದನ್ನು ಬರೆದಿದ್ದು, ಪಕ್ಷವು ದೇಶದಲ್ಲಿನ ಕೆಲವು ಪ್ರಮುಖ ವಿಷಯಗಳಲ್ಲಿ “ರಸ್ತೆ ತಡೆ ಪಾತ್ರವನ್ನು ಮಾತ್ರ ವಹಿಸಿದೆ” ಮತ್ತು ” ಎಲ್ಲವನ್ನೂ ವಿರೋಧಿಸುತ್ತಾ ಕೇವಲ ಕೆಳಗಿಳಿದಿದೆ” ಎಂದು ಪ್ರತಿಪಾದಿಸಿದ್ದಾರೆ. “ಇತ್ತೀಚೆಗೆ ಬಿಜೆಪಿಯನ್ನು ಅದರ “ನಿರ್ಣಯ ಮಾಡುವ” ನಾಯಕತ್ವಕ್ಕಾಗಿ ಪಟೇಲ್ ಹೊಗಳಿದ್ದರು.
ಕಬಡ್ಡಿ ಆಟಗಾರ ಮತ್ತು ಪ್ರಸಿದ್ಧ ಯುವ ಕಲಾವಿದ ಸಿಧು ಮೂಸ್ ವಾಲಾ ನಿರ್ಮಮ ಹತ್ಯೆಯ ಕುರಿತು ಪಂಜಾಬ್ ಸರಕಾರದ ಅದಕ್ಷತೆಯ ವಿರುದ್ದವೂ ಪಟೇಲ್ ಹರಿಹಾಯ್ದಿದ್ದಾರೆ.