ಉಡುಪಿ: ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆ ಎಸ್ ಡಿ ಸಿ)ದ ತರಬೇತು ಪಾಲುದಾರ ಸಂಸ್ಥೆಯಾಗಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯಲ್ಲಿ ಐಟಿ/ಐಟಿಇಎಸ್ ಕ್ಷೇತ್ರದ ಜೂನಿಯರ್ ಸಾಫ್ಟ್ ವೇರ್ ಡೆವಲಪರ್ ಕೋರ್ಸ್ ಮತ್ತು ಬಿ ಎಫ್ ಎಸ್ ಐ ಕ್ಷೇತ್ರದ ಸ್ಮಾಲ್ ಅಂಡ್ ಮೀಡಿಯಂ ಸ್ಕೇಲ್ ಎಂಟರ್ಪ್ರೈಸ್ ಆಫೀಸರ್ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಮೇ 21 ಶನಿವಾರದಂದು ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಡೆರಿಕ್ ಮಸ್ಕರೇನಸ್ ಭಾಗವಹಿಸಿ, “ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಪರೀಕ್ಷೆ ಅಥವಾ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವುದಷ್ಟನ್ನೇ ನೋಡದೆ, ಆಯಾ ವಿಷಯಗಳಲ್ಲಿ ಆಳ ಅಧ್ಯಯನ ನಡೆಸಿ, ಪ್ರಾಯೋಗಿಕವಾಗಿ ತಾವು ಕಲಿತ ವಿದ್ಯೆಯನ್ನು ಉಪಯೋಗಿಸಿಕೊಳ್ಳುವುದನ್ನು ಕಲಿಯಬೇಕು. ಈ ಮೂಲಕ ತಮ್ಮಲ್ಲಿ ಅಡಕವಾಗಿರುವ ಕೌಶಲ್ಯವನ್ನು ನಿರಂತರ ವೃದ್ಧಿಸಿಕೊಳ್ಳುತ್ತಿರಬೇಕು. ಕಾಗ್ನಿಟಿವ್ ಸ್ಕಿಲ್ಸ್, ಆಟೋ ಮೋಟಾರ್ ಸ್ಕಿಲ್ಸ್ ಮತ್ತು ಎಫೆಕ್ಟಿವ್ ಸ್ಕಿಲ್ಸ್ ಈ ಮೂರೂ ಕೌಶಲ್ಯಗಳು ತಮ್ಮ ಭವಿಷ್ಯಕ್ಕೆ ಅತಿ ಅಗತ್ಯ ಹಾಗೂ ಇದನ್ನು ಅಭ್ಯರ್ಥಿಗಳೆಲ್ಲರೂ ಮನಗಾಣಬೇಕೆಂದು” ತಿಳಿಸಿದರು.
ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ, ” ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ
ಉತ್ತಮ ಉದ್ಯೋಗಾವಕಾಶ ಸೃಷ್ಟಿಸಲು ಈಗಾಗಲೇ ಅನೇಕ ಕಂಪೆನಿಗಳ ನುರಿತ ತಜ್ಞರೊಂದಿಗೆ ಒಪ್ಪಂದ ಮಾಡಿಕೊಂಡು ಹೊಸ ಕೋರ್ಸ್ ಗಳನ್ನು ಪರಿಚಯಿಸುತ್ತಿದೆ. ಈ ಎಲ್ಲಾ ಕೋರ್ಸ್ ಗಳಿಗೆ ಉತ್ತಮ ಬೇಡಿಕೆಯಿದ್ದು, ಪ್ರಾಯೋಗಿಕವಾಗಿ ಕಲಿಕೆಯೊಂದಿಗೆ ಉತ್ತಮ ಉದ್ಯೋಗವಕಾಶವನ್ನೂ ಪಡೆಯಲು ಸಹಕಾರಿಯಾಗಲಿದೆ” ಎಂದರು.
ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ಲಾಕ್ಸಿನ್, ರಾಜೇಶ್, ಸುಪ್ರೀತ, ಐನೇಶ್, ಯೋಗಿತಾ ಉಪಸ್ಥಿತರಿದ್ದರು.