ಉಡುಪಿ: ಸಿ.ಎ, ಸಿ.ಎಸ್, ಎಂಬಿಎ, ಪದವಿ, ಪಿಯುಸಿ(ಕಾಮರ್ಸ್) ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಮೇ 20 ರಿಂದ ಸಿಎ ಫೌಂಡೇಶನ್ ಕ್ರ್ಯಾಶ್ ಕೋರ್ಸ್ ಆರಂಭವಾಗಲಿದೆ.
ಸಿಎ ಫೌಂಡೇಶನ್ ಸಂಬಂಧಿಸಿದ ವಿಷಯಗಳ ಕುರಿತಾಗಿ ಉಡುಪಿ, ಮಂಗಳೂರು, ಮುಂಬಯಿಯ ಪ್ರಸಿದ್ದ ಪ್ರಾಧ್ಯಾಪಕರ ನೇತೃತ್ವದಲ್ಲಿ ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಈ ತರಬೇತಿ ಆಯೋಜಿಸಲಾಗಿದೆ. ಪ್ರತಿದಿನ ಸಿಎ ಫೌಂಡೇಶನ್ ಗೆತರಗತಿಗಳು ಜರುಗಲಿದ್ದು, ಪ್ರಶ್ನೆ ಪತ್ರಿಕೆಗಳನ್ನು ಅತ್ಯಂತ ಸುಲಭ ವಿಧಾನದಿಂದ ಬಗೆ ಹರಿಸುವ ಕುರಿತು ತರಗತಿಗಳು ಜರುಗಲಿವೆ. ತರಬೇತಿ ಅಂತ್ಯದಲ್ಲಿ ಎಲ್ಲ ವಿಷಯಗಳ ಕುರಿತಾಗಿ ಮಾದರಿ ಸಿದ್ದತಾ ಪರೀಕ್ಷೆ ಆಯೋಜಿಸಲಾಗಿದೆ. ಕ್ರ್ಯಾಶ್ ಕೋರ್ಸ್ ತರಬೇತಿ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಸಂಸ್ಥೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.