ಹೆಬ್ರಿ: ಹೊಳೆಗೆ ಬಲೆ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆ ನೀರಿಗೆ ಬಿದ್ದು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಬೈದಡಪು ಹೊಳೆಯಲ್ಲಿ ಮೇ.12ರಂದು ಸಂಜೆ ನಡೆದಿದೆ.
ವರಂಗ ಗ್ರಾಮದ ಬೈದಡಪು ನಿವಾಸಿ 69 ವರ್ಷದ ಶ್ರೀಧರ ಪೂಜಾರಿ ಮೃತದುರ್ದೈವಿ. ಇವರು ಮೇ.12ರಂದು ಸಂಜೆ ಬೈದಡಪು ಹೊಳೆಗೆ ಮೀನು ಹಿಡಿಯಲು ಹೋಗಿದ್ದು, ದಡದಲ್ಲಿ ನಿಂತು ಬಲೆ ಹಾಕಿ ಮೀನು ಹಿಡಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದಿದ್ದಾರೆ.
ಹೊಳೆಯಲ್ಲಿ ಕೆಸರು ತುಂಬಿದ್ದರಿಂದ ಶ್ರೀಧರ ಅವರಿಗೆ ಮೇಲೆ ಬರಲು ಆಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.