ವಿಚ್ಛೇದಿತೆ ನಾಪತ್ತೆ

ಉಡುಪಿ: ವಿವಾಹ ವಿಚ್ಛೇದನ ಪಡೆದು ಮಾನಸಿಕವಾಗಿ ನೊಂದಿದ್ದ ಸಹನ (23) ಎಂಬ ಮಹಿಳೆಯು ಏಪ್ರಿಲ್ 19 ರಂದು ಮಧ್ಯಾಹ್ಮ 12 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು, ಕೊಂಕಣಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಚೇರಿ ದೂ.ಸಂಖ್ಯೆ: 08258-231083, ಮೊ.ನಂ: 9480805435, ಕಾರ್ಕಳ ಗ್ರಾಮಾಂತರ ಠಾಣೆ ದೂ.ಸಂಖ್ಯೆ: 08258-232083, 233100, ಮೊ.ನಂ: 9480805462 ಗೆ ಮಾಹಿತಿ ನೀಡುವಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.