ಮಣಿಪಾಲ: ತಾಯಂದಿರ ದಿನದ ಅಂಗವಾಗಿ ಮಾಹೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗಾಗಿ ಮೇ.8 ರವಿವಾರದಂದು ಮಣಿಪಾಲ್ ಫಿಟ್-ಎ-ಥಾನ್ ಅನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದು, “ಬಿಟ್ಟುಕೊಡುವುದು ಒಂದು ಆಯ್ಕೆಯಲ್ಲ”ಎನ್ನುವ ಥೀಮ್ ಆಧಾರಿತವಾಗಿತ್ತು.
FITVIB (ಕೆ.ಎಂ.ಸಿಯ ಫಿಟ್ನೆಸ್ ಕ್ಲಬ್) VSO (ಸ್ವಯಂಸೇವಕ ಸೇವೆಗಳ ಸಂಸ್ಥೆ), ಮತ್ತು MRC (ಮಣಿಪಾಲ್ ರನ್ನರ್ಸ್ ಕ್ಲಬ್) ಸಹಯೋಗದೊಂದಿಗೆ ಮಣಿಪಾಲ್ ಫಿಟ್-ಎ-ಥಾನ್ ಅನ್ನು ಆಯೋಜಿಸಲಾಗಿತ್ತು.
ರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಮತ್ತು ಕಾಮನ್ ವೆಲ್ತ್ ಗೇಮ್ಸ್ ಭಾರತವನ್ನು ಪ್ರತಿನಿಧಿಸಿರುವ ಅಥ್ಲೀಟ್ ಶ್ರೀಮತಿ ಶ್ರೀಮಾ ಪ್ರಿಯದರ್ಶಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯುವಕರಿಂದ ಮುದುಕರವರೆಗೆ ವಿವಿಧ ವಯಸ್ಸಿನ ನಾಗರಿಕರು ಫಿಟ್-ಎ-ಥಾನ್ ನಲ್ಲಿ ಭಾಗವಹಿಸಿದರು. ಮಹಿಳೆಯರಿಗಾಗಿ ಸೀರೆ ಓಟ (3 ಕಿಮೀ-ಫ್ರೀ), ಮ್ಯಾರಥಾನ್ (5 ಕಿಮೀ ಮತ್ತು 10 ಕಿಮೀ) ಮತ್ತು ಫನ್ ಫಿಯೆಸ್ಟಾವನ್ನು ಒಳಗೊಂಡಿತ್ತು.