ಉಡುಪಿ: ಶ್ರೀಕೃಷ್ಣಮಠಕ್ಕೆ ಶ್ರೀಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಆಗಮಿಸಿ ಭೇಟಿ ನೀಡಿದರು. ಅವರನ್ನು ಸಂಸ್ಕೃತ ಕಾಲೇಜಿನ ಬಳಿಯಿಂದ ಬಿರುದಾವಳಿ, ವಾದ್ಯ-ವೇದಘೋಷದೊಂದಿಗೆ ಸ್ವಾಗತಿಸಲಾಯಿತು.
ಶ್ರೀಕೃಷ್ಣಮಠದ ಹೆಬ್ಬಾಗಿಲಿನಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಬರಮಾಡಿಕೊಂಡು ದೇವರ ದರ್ಶನ ಮಾಡಿಸಿ ಗಂಧಾದ್ಯುಪಚಾರಗಳೊಂದಿಗೆ ಗೌರವಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ರವರು ಮಾಲಿಕೆ ಮಂಗಳಾರತಿ ನಡೆಸಿದರು.