ಕುಂದಾಪುರ: ಅಂಪಾರು ಗ್ರಾಮದಲ್ಲಿ ಅತಿಯಾದ ಮದ್ಯ ಸೇವನೆಯಿಂದ ಹಠಾತ್ ಆಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದಲ್ಲಿ ಮೇ. 6 ರಂದು ಸಂಜೆ ನಡೆದಿದೆ.
ಮೃತರನ್ನು ಅಂಪಾರು ಗ್ರಾಮದ ನಿವಾಸಿ 40 ವರ್ಷದ ರಾಘವೇಂದ್ರ ಎಂದು ಗುರುತಿಸಲಾಗಿದೆ. ಇವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದರು. ಅತಿಯಾದ ಮದ್ಯಪಾನ ಹಾಗೂ ಸರಿಯಾಗಿ ಆಹಾರ ಸೇವನೆ ಮಾಡದೆ ದೈಹಿಕವಾಗಿ ಬಳಲಿದ್ದರು. ಇದೇ ಕಾರಣದಿಂದ ಮೇ. 6 ರಂದು ಸಂಜೆ ಹಠಾತ್ ಆಗಿ ಮೃತಪಟ್ಟಿದ್ಧಾರೆ.
ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.