ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ತೇಲುವ ಸೇತುವೆ

ಉಡುಪಿ: ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವಿನೂತನ ಮಾದರಿಯ ತೇಲುವ ಸೇತುವೆ ಅಳಡಿಸಲಾಗಿದ್ದು, ಮೇ.6 ರಿಂದ ಪ್ರವಾಸಿಗರಿಗೆ ಮುಕ್ತಗೊಳ್ಳಲಿದೆ.

100 ಮೀಟರ್‌ ಉದ್ದ ಮತ್ತು 3.5 ಮೀಟರ್‌ ಅಗಲ ವಿಸ್ತೀರ್ಣದ ತೇಲುವ ಸೇತುವೆ ಇದಾಗಿದ್ದು, ಸೇತುವೆಯ ಎರಡು ಇಕ್ಕೆಲಗಳಲ್ಲಿ ರೇಲಿಂಗ್‌ ಸಿಸ್ಟಮ್‌ ಅಳವಡಿಕೆ ಮಾಡಲಾಗಿದೆ.

ಕೇರಳದ ಬೇಪೂರ್‌ ಬೀಚ್‌ ಬಳಿಕ ಕರ್ನಾಟಕದ ಮಲ್ಪೆ ಬೀಚ್‌ ನಲ್ಲಿ ಪ್ರಥಮ ಬಾರಿಗೆ ಪ್ರಯೋಗ ಮಾಡಲಾಗುತ್ತಿದೆ. ಇದು ಪ್ರವಾಸಿಗರಿಗೆ ಹೊಸ ಅನುಭವ ನೀಡಲಿದ್ದು, ಮಲ್ಪೆ ಪ್ರವಾಸೋದ್ಯಮಕ್ಕೆ ಹೊಸ ಮೆರಗು ನೀಡಲಿದೆ.